ಶನಿವಾರ, ಮಾರ್ಚ್ 6, 2021
22 °C

ಜಯಾ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ಜಯಾ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸ್ಮಾರಕ ನಿರ್ಮಾಣಕ್ಕೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರು ಸೋಮವಾರ ಶಂಕಸ್ಥಾಪನೆ ನೆರವೇರಿಸಿದರು.

ಜಯಲಲಿತಾ ಸಮಾಧಿ ಇರುವ ಮರೀನಾ ಬೀಚ್‌ ಪ್ರದೇಶದಲ್ಲಿ ಪಳನಿಸ್ವಾಮಿ ಅವರು ಮೊದಲ ಹಾಗೂ ಪನ್ನೀರ್‌ಸೆಲ್ವಂ ಅವರು ಎರಡನೇ ಇಟ್ಟಿಗೆ ಇಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. ಯಜ್ಞ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ಲೋಕಸಭೆ ಉಪಾಧ್ಯಕ್ಷ ಎಂ.ತಂಬಿದೊರೈ ಸೇರಿದಂತೆ ತಮಿಳುನಾಡಿನ ಸಚಿವರು ಹಾಗೂ ಶಾಸಕರು ಪಾಲ್ಗೊಂಡಿದ್ದರು.

ಉದ್ದೇಶಿತ ಸ್ಮಾರಕದ ‘ಮಂಟಪ‘ ಎಐಎಡಿಎಂಕೆ ಸ್ಥಾಪಕರೂ ಆಗಿದ್ದ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಸ್ಮಾರಕದ ಹಿಂದೆಯೇ ಇದೆ. ಜಯಾ ಅವರು 2016ರ ಡಿಸೆಂಬರ್‌ 5ರಂದು ಮೃತಪಟ್ಟಿದ್ದರು. ಮರೀನಾ ಬೀಚ್‌ನಲ್ಲಿ ‘ಅಮ್ಮ’ ಸ್ಮಾರಕವನ್ನು ₹50.8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಬಜೆಟ್‌ ಅಧಿವೇಶನದಲ್ಲೂ ಪನ್ನೀರ್‌ಸೆಲ್ವಂ ಹೇಳಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.