ಶುಕ್ರವಾರ, ಫೆಬ್ರವರಿ 26, 2021
27 °C

ಜೀವನ್‌–ಪೆರೆಜ್‌ ರನ್ನರ್ಸ್‌ ಅಪ್‌

ಪಿಟಿಐ Updated:

ಅಕ್ಷರ ಗಾತ್ರ : | |

ಜೀವನ್‌–ಪೆರೆಜ್‌ ರನ್ನರ್ಸ್‌ ಅಪ್‌

ನವದೆಹಲಿ: ಭಾರತದ ಜೀವನ್‌ ನೆಡುಂಚೇಳಿಯನ್‌ ಮತ್ತು ಸ್ಪೇನ್‌ನ ಎನ್ರಿಕ್‌ ಲೊಪೆಜ್‌ ‍ಪೆರೆಜ್‌ ಅವರು ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಸವನ್ನಾ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಗಿದ್ದಾರೆ.

ಭಾನುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಜೀವನ್ ಮತ್ತು ಪೆರೆಜ್‌ 2–6, 2–6ರ ನೇರ ಸೆಟ್‌ಗಳಿಂದ ಬ್ರಿಟನ್‌ನ ಲ್ಯೂಕ್‌ ಬ್ಯಾಂಬ್ರಿಡ್ಜ್‌ ಮತ್ತು ಆಸ್ಟ್ರೇಲಿಯಾದ ಅಕಿರಾ ಸ್ಯಾಂಟಿಲನ್ ವಿರುದ್ಧ ಸೋತರು.

ಇದರೊಂದಿಗೆ ಸತತ ಎರಡನೇ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಪ್ರಶಸ್ತಿ ಜಯಿಸಿದರು. ಇತ್ತೀಚೆಗೆ ನಡೆದಿದ್ದ ತಲ್ಲಾಹಸಿ ಚಾಲೆಂಜರ್‌ ಟೂರ್ನಿಯ ಫೈನಲ್‌ನಲ್ಲಿ ಜೀವನ್‌ ಮತ್ತು ಪೆರೆಜ್‌ ಅವರು ರಾಬರ್ಟ್‌ ಗ್ಯಾಲೋವ್‌ ಮತ್ತು ಡೆನಿಸ್‌ ಕುಡ್ಲಾ ವಿರುದ್ಧ ಪರಾಭವ

ಗೊಂಡಿದ್ದರು.‌

ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿದ್ದ ಭಾರತ ಮತ್ತು ಸ್ಪೇನ್‌ನ ಜೋಡಿ ಮೊದಲ ಸೆಟ್‌ನ ಆರಂಭದ ನಾಲ್ಕು ಗೇಮ್‌ಗಳಲ್ಲಿ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿತು. ನಂತರ ಲ್ಯೂಕ್‌ ಮತ್ತು ಅಕಿರಾ ಪ್ರಾಬಲ್ಯ ಮೆರೆದು ಸೆಟ್‌ ಗೆದ್ದರು.

ಎರಡನೇ ಸೆಟ್‌ನಲ್ಲೂ ಜೀವನ್‌ ಮತ್ತು ಪೆರೆಜ್‌ ಮಂಕಾದರು. ಹಲವು ತಪ್ಪುಗಳನ್ನು ಮಾಡಿದ ಭಾರತ ಮತ್ತು ಸ್ಪೇನ್‌ನ ಜೋಡಿ ಸುಲಭವಾಗಿ ಸೋಲೊಪ್ಪಿಕೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.