ಸೋಮವಾರ, ಮಾರ್ಚ್ 1, 2021
28 °C
ಕಿಂಗ್ಸ್ ಇಲೆವನ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌, ಕನ್ನಡಿಗ ಕೆ.ಎಲ್‌.ರಾಹುಲ್‌ ವಿವರಣೆ

ಬ್ಯಾಟಿಂಗ್ ‘ಪವರ್‌’ ಹೊರಗೆಡವಲು ಯತ್ನ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಬ್ಯಾಟಿಂಗ್ ‘ಪವರ್‌’ ಹೊರಗೆಡವಲು ಯತ್ನ

ಮುಂಬೈ: ‘ಐಪಿಎಲ್‌ನಲ್ಲಿ ಎಷ್ಟು ಸಾಧ್ಯವಿದೆಯೋ ಅಷ್ಟು ರನ್‌ ಗಳಿಸುವುದು ನನ್ನ ಉದ್ದೇಶ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಪ್ರತಿ ಪಂದ್ಯದಲ್ಲೂ ಗರಿಷ್ಠ ರನ್‌ ಸೇರಿಸುವ ಕಡೆಗೆ ನೋಟ ಇಟ್ಟಿದ್ದೇನೆ’ ಎಂದು ಕಿಂಗ್ಸ್ ಇಲೆವನ್ ತಂಡದ ಕೆ.ಎಲ್‌.ರಾಹುಲ್ ಹೇಳಿದರು.

ಇಂದೋರ್‌ನಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಕಿಂಗ್ಸ್ ಇಲೆವನ್‌ ತಂಡ ಆರು ವಿಕೆಟ್‌ಗಳ ಜಯ ಸಾಧಿಸಲು ಪ್ರಮುಖ ಕಾರಣರಾದ ರಾಹುಲ್ ಪಂದ್ಯದ ನಂತರ ಐಪಿಎಲ್‌ ವೆಬ್‌ಸೈಟ್‌ಗೆ ಸಂದರ್ಶನ ನೀಡಿದರು.

‘ಆರಂಭಿಕ ಬ್ಯಾಟ್ಸ್‌ಮನ್‌ ಕೊನೆಯ ವರೆಗೂ ಕ್ರೀಸ್‌ನಲ್ಲಿ ಉಳಿದರೆ ಅಂತಿಮ ಓವರ್‌ಗಳ್ಲಲಿ ಎದುರಾಳಿ ತಂಡಕ್ಕೆ ಹೆಚ್ಚು ಅಪಾಯಕಾರಿಯಾಗಬಲ್ಲರು. ಹೀಗಾಗಿ ಪ್ರತಿ ಪಂದ್ಯದಲ್ಲಿ ಕೊನೆಯ ವರೆಗೂ ಬ್ಯಾಟಿಂಗ್ ಮುಂದುವರಿಸುವತ್ತ ಚಿತ್ತ ಹರಿಸಿದ್ದೇನೆ’ ಎಂದು ಅವರು ಹೇಳಿದರು.

‘ಭಾನುವಾರದ ಇನಿಂಗ್ಸ್ ಖುಷಿ ನೀಡಿದೆ. ಇಂಥ ಆಟ ಆಡುವ ಬಗ್ಗೆ ನಾನು ಯೋಚಿಸುತ್ತಿದ್ದೆ. ಹಿಂದಿನ ಆವೃತ್ತಿಗಳಲ್ಲಿ ಆಡಿದ್ದನ್ನು ಮರೆತು ಹೊಸ ಚಿಂತನೆಗಳೊಂದಿಗೆ ಈ ಆವೃತ್ತಿಯಲ್ಲಿ ಕಣಕ್ಕೆ ಇಳಿದಿದ್ದೆ. ನನ್ನ ಆಟವನ್ನು ಉತ್ತಮಪಡಿಸುತ್ತ ತಂಡಕ್ಕೆ ಹೆಚ್ಚು ಗೆಲುವು ಗಳಿಸಿಕೊಡುವುದು ನನ್ನ ಉದ್ದೇಶ’ ಎಂದು ರಾಹುಲ್‌ ತಿಳಿಸಿದರು.

ಗರಿಷ್ಠ ಮೊತ್ತ: ಕೆ.ಎಲ್‌.ರಾಹುಲ್ ಭಾನುವಾರ ಗಳಿಸಿದ 84 ರನ್‌ಗಳು ಐಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಮೊದಲ ಎಸೆತಗಳಲ್ಲಿ 18 ರನ್‌ ಗಳಿಸಿದ್ದ ಅವರು ನಂತರ 43 ಎಸೆತಗಳಲ್ಲಿ 48 ‌ರನ್‌ ಗಳಿಸಿದ್ದರು. ಅರ್ಧಶತಕ ಪೂರೈಸಲು ಅವರು ತೆಗೆದುಕೊಂಡದ್ದು 44 ಎಸೆತ. ಐಪಿಎಲ್‌ನಲ್ಲಿ ಇದು ಅವರ ಅತ್ಯಂತ ನಿಧಾನದ ಅರ್ಧ ಶತಕವಾಗಿದೆ.

ರಾಯಲ್ಸ್ ವಿರುದ್ಧದ ಜಯದೊಂದಿಗೆ ಕಿಂಗ್ಸ್‌ ತಂಡ ಒಂಬತ್ತು ಪಂದ್ಯಗಳ ಪೈಕಿ ಆರರಲ್ಲಿ ಗೆದ್ದು ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.