ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದರೂ ಇಲ್ಲದಂತಿರುವ ಆರೋಗ್ಯ ಕೇಂದ್ರ

ಪೊನ್ನಾಚಿ ಭಾಗದ ಗ್ರಾಮಗಳಲ್ಲಿ ಚಿಕಿತ್ಸೆಗಾಗಿ ಪರದಾಟ
Last Updated 8 ಮೇ 2018, 9:53 IST
ಅಕ್ಷರ ಗಾತ್ರ

ಮಲೆ ಮಹದೇಶ್ವರ ಬೆಟ್ಟ: ಸಮೀಪದ ಪೊನ್ನಾಚಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದ್ದು, ಈ ಭಾಗದ ಗ್ರಾಮಸ್ಥರು ಪರದಾಡುವಂತಾಗಿದೆ.

ಇಲ್ಲಿನ ಆಸ್ಪತ್ರೆಗೆ ನಿಯೋಜನೆ ಗೊಂಡಿರುವ ವೈದ್ಯರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಅಲ್ಲದೇ, ಸಿಬ್ಬಂದಿ ಕೊರತೆ ಇರುವುದರಿಂದ ಬೆಳಿಗ್ಗೆ 12 ಗಂಟೆಗೆ ಬಾಗಿಲು ತೆಗೆದು 3 ಗಂಟೆಗೆ ಮುಚ್ಚಲಾಗುತ್ತಿದೆ. ಪೊನ್ನಾಚಿ, ಅಸ್ತೂರು, ಮರೂರು ಸೇರಿದಂತೆ ಈ ಭಾಗದ ಸುಮಾರು 10 ಗ್ರಾಮಗಳ ಜನರು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದು ಈಗ ಸಣ್ಣ ಪುಟ್ಟ ಚಿಕಿತ್ಸೆಗೂ ಪಟ್ಟಣಕ್ಕೆ ಹೋಗಬೇಕಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸುಸಜ್ಜಿತ ಕಟ್ಟಡದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರವಿದೆ. ಆದರೆ, ಕಿರಿಯ ಮಹಿಳಾ ಸಹಾಯಕಿಯರು ಇಲ್ಲದಿರುವು ದರಿಂದ ಕಟ್ಟಡ ಏಕಾಂಗಿಯಾಗಿ ನಿಂತಿದೆ. ಅಲ್ಲದೇ, ಗರ್ಭಿಣಿ, ಬಾಣಂತಿಯರಿಗೆ ಕಬ್ಬಿಣಾಂಶದ ಮಾತ್ರೆಗಳು ಸೇರಿದಂತೆ ಅಗತ್ಯ ಸೌಲಭ್ಯ, ಮಾಹಿತಿಯೂ ದೊರೆಯದಂತಾಗಿದೆ.

‘ಗ್ರಾಮದಲ್ಲಿ ವಾಹನಗಳ ಸಂಚಾರವೂ ವಿರಳಾಗಿರುವುದರಿಂದ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲಾಗದೆ ಅವರು ಮೃತಪಟ್ಟ ಘಟನೆಗಳೂ ಸಂಭವಿಸಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಕಾಯಂ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಿಸಿ 24 ಗಂಟೆಯೂ ಅರೋಗ್ಯ ಸೇವೆ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಗ್ರಾಮಸ್ಥರಾದ ಶಿವಣ್ಣ, ಪೊನ್ನಮ್ಮ ಆಗ್ರಹಿಸಿದ್ದಾರೆ.

ಪೊನ್ನಾಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ವೈದ್ಯರು ಸರಿಯಾಗಿ ಹಾಜರಾಗದಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ತಾಲ್ಲೂಕು ವೈದ್ಯಾಧಿಕಾರಿಗೆ ಸೂಚಿಸಲಾಗುವುದು. ಜೊತೆಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ‘ಪ್ರಜಾವಾಣಿ’ಗೆ ಜಿಲ್ಲಾ ವೈದ್ಯಾಧಿಕಾರಿ ಡಾ.ಪ್ರಸಾದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT