ಪತ್ರಕರ್ತ ರಾಜ್‍ದೀಪ್ ಸರ್ದೇಸಾಯಿ ಬಳಿ ಬಂದು 'ಮೋದಿ ಮೋದಿ' ಎಂದು ಕೂಗಿದ ಮೋದಿ ಅಭಿಮಾನಿ

7

ಪತ್ರಕರ್ತ ರಾಜ್‍ದೀಪ್ ಸರ್ದೇಸಾಯಿ ಬಳಿ ಬಂದು 'ಮೋದಿ ಮೋದಿ' ಎಂದು ಕೂಗಿದ ಮೋದಿ ಅಭಿಮಾನಿ

Published:
Updated:
ಪತ್ರಕರ್ತ ರಾಜ್‍ದೀಪ್ ಸರ್ದೇಸಾಯಿ ಬಳಿ ಬಂದು 'ಮೋದಿ ಮೋದಿ' ಎಂದು ಕೂಗಿದ ಮೋದಿ ಅಭಿಮಾನಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಸುದ್ದಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದ ಹಿರಿಯ ಪತ್ರಕರ್ತ ರಾಜ್‍ದೀಪ್ ಸರ್ದೇಸಾಯಿ ಬಳಿ ಬಂದ ವ್ಯಕ್ತಿಯೊಬ್ಬರು  ಮೋದಿ ಮೋದಿ ಎಂದು ಕೂಗಿದ್ದಾರೆ. ಸೋಮವಾರ ಬೆಂಗಳೂರಿನ ಹೋಟೆಲ್‍ವೊಂದರಲ್ಲಿ ಸರ್ದೇಸಾಯಿ ತಿಂಡಿ ತಿನ್ನುತ್ತಿದ್ದ ವೇಳೆ ಅಲ್ಲಿಗೆ ಬಂದ ನರೇಂದ್ರ ಮೋದಿಯ ಅಭಿಮಾನಿಯೊಬ್ಬರು 'ನೀವು ಹುಟ್ಟಿರುವುದು ಭಾರತದಲ್ಲಿ. ಹಿಂದೂಗಳನ್ನು ದ್ವೇಷಿಸಬೇಡಿ' ಎಂದು ಕೂಗಿರುವ ದೃಶ್ಯವೊಂದು ಮೊಬೈಲ್‍ನಲ್ಲಿ ಸೆರೆಯಾಗಿದೆ. ಮೋದಿ ಅಭಿಮಾನಿ ಈ ರೀತಿ ವರ್ತಿಸಿದಾಗ ಅಲ್ಲಿದ್ದ ಜನರೆಲ್ಲರೂ ಸರ್ದೇಸಾಯಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸರ್ದೇಸಾಯಿ ಅವರನ್ನು ಕೆಣಕಲೆಂದೇ ಬಂದ ಆ ವ್ಯಕ್ತಿ ಬೊಬ್ಬೆ ಹಾಕುವಾಗ ನಿಮಗೆ ಸಭ್ಯತೆ ಇಲ್ಲವೆ? ಎಂದು ಸರ್ದೇಸಾಯಿ ಪ್ರಶ್ನಿಸಿದ್ದಾರೆ. ಆಗ ಆ ವ್ಯಕ್ತಿ ಸಭ್ಯತೆ ಇಲ್ಲದಿರುವುದು ನಿಮಗೆ, ನೀವು ಸುದ್ದಿಗಳಲ್ಲಿ ಬಹಳಷ್ಟು ಕೀಳುಮಟ್ಟದ ವಿಷಯ ಹಂಚುತ್ತಿದ್ದೀರಿ ಎಂದಿದ್ದಾರೆ.

ಈ ವಿಡಿಯೊ ದೃಶ್ಯವನ್ನು ಬೆಂಗಳೂರಿನಲ್ಲಿ ರಾಜ್‍ದೀಪ್ ಅವರ ಮೆಡಿಸನ್ ಸ್ಕ್ವೇರ್ ಕ್ಷಣಗಳು ಎಂಬ ಶೀರ್ಷಿಕೆ ನೀಡಿ ಗಿರೀಶ್ ಆಳ್ವ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಸರ್ದೇಸಾಯಿ, ಇದಾದನಂತರ ಹೋಟೆಲ್‍ನಲ್ಲಿದ್ದ ವ್ಯಕ್ತಿಗಳು ನನ್ನ ಬೆಂಬಲಕ್ಕೆ ಹೇಗೆ ನಿಂತರು ಎಂಬುದನ್ನು ಆ ವ್ಯಕ್ತಿಗಳು ಹೇಳಲಿಲ್ಲವೇ? ಕ್ಷಮಿಸಿ, ಈ ಗೂಂಡಾಗಳು ಬೆಂಗಳೂರು ಅಥವಾ ಭಾರತವನ್ನು ಪ್ರತಿನಿಧೀಕರಿಸುವುದಿಲ್ಲ ಎಂದು ಅಲ್ಲಿದ್ದವರು ನನ್ನಲ್ಲಿ ಹೇಳಿದರು. ಇದೊಂದು ನಿರೀಕ್ಷೆ ಎಂದು ಟ್ವೀಟಿಸಿದ್ದಾರೆ.

ಆ ಹೊತ್ತಲ್ಲಿ ಸರ್ದೇಸಾಯಿಯವರ ಸಂಯಮದ ವರ್ತನೆಯನ್ನು ಟ್ವೀಟಿಗರು ಶ್ಲಾಘಿಸಿದ್ದಾರೆ.

ಇಂಥಾ ಶ್ಲಾಘನೆಯ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಸರ್ದೇಸಾಯಿ, ಸರ್ ಧನ್ಯವಾದಗಳು. ಇದೆಲ್ಲ ವೃತ್ತಿಯ ಅಪಾಯಗಳು, ಫಿರ್ ಸುಬಾಹ್ ಹೋಗಿ  (ಮತ್ತೆ ಬೆಳಗಾಗುವುದು) ಎಂದಿದ್ದಾರೆ.

ಮಂಗಳೂರಿನಲ್ಲಿಯೂ ಇದೇ ರೀತಿ ಆಗಿತ್ತು!
ಮೇ 5,ಶನಿವಾರ ಮಂಗಳೂರಿನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ  ಕಾರ್ಯಕ್ರಮದ ವರದಿ ಮಾಡಲು ಸರ್ದೇಸಾಯಿ ನೆಹರೂ ಮೈದಾನಕ್ಕೆ ತಲುಪಿದ್ದರು. ಅಲ್ಲಿ ವರದಿ ಮಾಡಲು ಬಂದಿದ್ದ ಸರ್ದೇಸಾಯಿ ಅವರನ್ನು ಕಂಡೊಡನೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗಿ ಸುತ್ತುವರಿದ ಘಟನೆ  ನಡೆದಿತ್ತು.

ಮೆಡಿಸನ್ ಸ್ಕ್ವೇರ್ ‍ನಲ್ಲಿ ನಡೆದಿದ್ದೇನು?
2014 ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಮೆಡಿಸನ್ ಸ್ಕ್ವೇರ್ ನಲ್ಲಿ ಭಾಷಣ ಮಾಡಿದ್ದರು. ಈ ವೇಳೆ ಅಲ್ಲಿ ನೆರೆದಿದ್ದ ಜನಜಂಗುಳಿಗೆ ಪ್ರಶ್ನೆ ಕೇಳಲು ಹೋದಾಗ ಮೋದಿ ಅಭಿಮಾನಿಗಳು ಸರ್ದೇಸಾಯಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುಜರಾತ್ ಗಲಭೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ವಿಶ್ವ ಬದಲಾಗಿದೆ ಎಂದು ನೀವು ಭಾವಿಸುತ್ತೀರಾ? ಎಂದು ಜನಜಂಗುಳಿಯನ್ನು ಸರ್ದೇಸಾಯಿ ಪ್ರಶ್ನಿಸಿದ್ದರು. ಇದರಿಂದ ಸಿಟ್ಟುಗೊಂಡ ಅಭಿಮಾನಿಗಳು ವಿಶ್ವ ಬದಲಾಗಿದೆ, ಆದರೆ ನೀವು ಮಾತ್ರ ಇನ್ನೂ ಬದಲಾಗಿಲ್ಲ ಎಂದು ಘೋಷಣೆ ಕೂಗಿ ಹಲ್ಲೆಗೆ ಮುಂದಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry