ಕುಲ್ಲೇಟಿರ ಹಾಕಿ: 11 ತಂಡಗಳು ಮುನ್ನಡೆ

7
ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡೆ

ಕುಲ್ಲೇಟಿರ ಹಾಕಿ: 11 ತಂಡಗಳು ಮುನ್ನಡೆ

Published:
Updated:

ನಾಪೋಕ್ಲು: ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ‘ಕುಲ್ಲೇಟಿರ ಹಾಕಿ ನಮ್ಮೆ’ಯಲ್ಲಿ ಕೋಡಿಮಣಿಯಂಡ, ಐನಂಡ, ಚೌರೀರ (ಹೊದ್ದೂರು), ಚೆಪ್ಪುಡಿರ, ಸುಳ್ಳಿಮಾಡ, ಕರಿನೆರವಂಡ, ಮಾತಂಡ, ಶಾಂತೆಯಂಡ, ಸೋಮೆಯಂಡ, ಚೇಂದಿರ, ಕುಮ್ಮಂಡ ತಂಡಗಳು ಜಯ ಗಳಿಸಿ ಮುಂದಿನ ಸುತ್ತು ಪ್ರವೇಶಿಸಿವೆ.

ಕೋಡಿಮಣಿಯಂಡ ತಂಡವು ಕಟ್ಟೆರ ತಂಡವನ್ನು 3–0 ಅಂತರದಲ್ಲಿ ಸೋಲಿಸಿತು. ವಿವೇಕ್ ಉತ್ತಪ್ಪ ಎರಡು, ಪೂಣಚ್ಚ ಒಂದು ಗೋಲು ದಾಖಲಿಸಿದರು.

ಐನಂಡ ತಂಡವು ಬೊಳ್ಳಂಡ ತಂಡವನ್ನು ಟೈಬ್ರೇಕರ್‌ನಲ್ಲಿ ಮಣಿಸಿತು. ಚೌರೀರ (ಹೊದ್ದೂರು) ಮತ್ತು ಬೊಳ್ಳಚಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೌರೀರ ತಂಡವು ಬೊಳ್ಳಚಂಡ ತಂಡವನ್ನು ಟೈಬ್ರೇಕರ್‌ನಲ್ಲಿ ಸೋಲಿಸಿ, ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಚೆಪ್ಪುಡಿರ ತಂಡವು ಬಾದುಮಂಡ ತಂಡವನ್ನು 5–0 ಅಂತರದಲ್ಲಿ ಸೋಲಿಸಿತು. ತಂಡದ ಪರ ವಚನ್, ಸೋಮಣ್ಣ ತಲಾ ಎರಡು, ಚೇತನ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಸುಳ್ಳಿಮಾಡ ಮತ್ತು ಬಿದ್ದಂಡ ತಂಡಗಳ ನಡುವಿನ ಪಂದ್ಯದಲ್ಲಿ ಸುಳ್ಳಿಮಾಡ ತಂಡವು ಬಿದ್ದಂಡ ತಂಡವನ್ನು ಟೈಬ್ರೇಕರ್‌ನಲ್ಲಿ 5–4 ಅಂತರದಲ್ಲಿ ಸೋಲಿಸಿತು.

ಕರಿನೆರವಂಡ ತಂಡವು ಕೊಟ್ಟಂಗಡ ತಂಡವನ್ನು 2– 0 ಅಂತರದಲ್ಲಿ ಸೋಲಿಸಿತು. ಕರಿನೆರವಂಡ ತಂಡದ ಪರ ಬಿದ್ದಪ್ಪ, ಲಿತೇಶ್ ತಲಾ ಒಂದೊಂದು ಗೋಲು ದಾಖಲಿಸಿ, ತಂಡವನ್ನು ಗೆಲ್ಲಿಸಿದರು.

ಮಾತಂಡ ತಂಡವು ಮೇಚಿಯಂಡ ತಂಡವನ್ನು 1– 0 ಅಂತರದಲ್ಲಿ ಸೋಲಿಸಿತು. ಮಾತಂಡ ಪರ ಸೂರಜ್ ಒಂದು ಗೋಲು ದಾಖಲಿಸಿದರು.

ಶಾಂತೆಯಂಡ ತಂಡವು ಚೀಯಕಪೂವಂಡ ತಂಡವನ್ನು ಟೈಬ್ರೇಕರ್‌ನಲ್ಲಿ 6–4 ಅಂತರದಿಂದ ಸೋಲಿಸಿತು. ಸೋಮೆಯಂಡ ಮತ್ತು ಮುಕ್ಕಾಟಿರ (ಹರಿಹರ) ತಂಡಗಳ ನಡುವಿನ ಪಂದ್ಯದಲ್ಲಿ ಸೋಮೆಯಂಡ ತಂಡವು ಮುಕ್ಕಾಟಿರ ತಂಡವನ್ನು 3–1 ಅಂತರದಲ್ಲಿ ಸೋಲಿಸಿತು. ಸೋಮೆಯಂಡ ತಂಡದ ಪರ ಸುಜು ಹ್ಯಾಟ್ರಿಕ್ ಮೂರು ಗೋಲು ದಾಖಲಿಸಿದರೆ, ಮುಕ್ಕಾಟಿರ ತಂಡದ ಪರ ಮಂದಣ್ಣ ಒಂದು ಗೋಲು ದಾಖಲಿಸಿದರು.

ಚೇಂದಿರ ತಂಡವು ಕಾಯಪಂಡ ತಂಡವನ್ನು 4–0 ಅಂತರದಲ್ಲಿ ಪರಾಭವಗೊಳಿಸಿತು. ತಂಡದ ಪರ ಪ್ರೀತಂ ಪೂವಯ್ಯ ಮೂರು, ಪುನೀತ್ ಪೊನ್ನಣ್ಣ ಒಂದು ಗೋಲು ದಾಖಲಿಸಿದರು.

ಕುಮ್ಮಂಡ ಮತ್ತು ತೀತಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕುಮ್ಮಂಡ ತಂಡವು ತೀತಮಾಡ ತಂಡವನ್ನು ಟೈ ಬ್ರೇಕರ್‌ನ3–2 ಗೋಲಿನಿಂದ ಸೋಲಿಸಿತು.

ಇಂದಿನ ಪಂದ್ಯಗಳು

ತಿರುಟೆರ – ಅನ್ನಾಡಿಯಂಡ

ಬಾಚಿರ – ಮಂಡೇಪಂಡ

ಕೂತಂಡ – ಕಂಗಾಂಡ

ಮಾಚಿಮಂಡ – ಪೆಮ್ಮಂಡ

ಇಟ್ಟಿರ – ಮೇಕೇರಿರ

ಕುಲ್ಲೇಟಿರ – ಮದ್ರಿರ

ಪುಲಿಯಂಡ – ಬಾಳೆಯಡ

ಚೆರುಮಂದಂಡ – ಮಾಚಂಗಡ

ಕಾಂಡಂಡ – ಚಂದಪಂಡ

ಮುಂಡೋಟಿರ –  ಮುಕ್ಕಾಟಿರ (ಬೋಂದ)

ಐಚಂಡ – ಮಾಚಂಡ

ಕೋದಂಡ – ಕರ್ತಮಾಡ (ಬಿರುನಾಣಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry