ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ

Last Updated 10 ಮೇ 2018, 13:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗಳ ನಡುವಿನ ಪೈಪೋಟಿ, ಪ್ರಚಾರ ಭರಾಟೆ, ಜಾಥಾ, ಭಾಷಣಗಳು ಜನರನ್ನು ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯನ್ನು ಹುಟ್ಟುಹಾಕಿವೆ.

ಪ್ರಚಾರದ ಕೊನೆಯ ಹಂತದಲ್ಲಿರುವ ಎರಡು ಪಕ್ಷಗಳ ಮುಖ್ಯಭೂಮಿಕೆಯಾಗಿರುವ ಸಾಮಾಜಿಕ ಜಾಲತಾಣ ಈ ಬಾರಿ ಗೆಲುವು ಯಾರದ್ದು? ಯಾವ ಪಕ್ಷ ಉತ್ತಮ? ಯಾರಿಗೆ ನಿಮ್ಮ ಮತ? ಉತ್ತಮ ನಾಯಕರನ್ನು ಆಯ್ಕೆ ಮಾಡಿ ಇಂತಹ ಪ್ರಶ್ನೋತ್ತರಗಳು ಜನರೆಡೆಯಿಂದ ತೇಲಿ ಬರುತ್ತಿದ್ದೆ.

ಜತೆಗೆ ಚುನಾವಣೆ ಕುರಿತಾಗಿ ಪಕ್ಷಗಳ ನಾಯಕರು, ಕಾರ್ಯಕರ್ತರು, ಬೆಂಬಲಿಗರ ನಡುವೆ ನಡೆಯುವ ಪರ ವಿರೋಧದ ಟೀಕೆ ಟಿಪ್ಪಣಿಗಳು, ವ್ಯಂಗ್ಯಗಳು, ಚರ್ಚೆಗಳು, ವಿವಾದಗಳು, ಜಟಾಪಟಿಗಳು ಕೂಡ ಚುನಾವಣೆಯಷ್ಟೇ ಚುರುಕಾಗಿವೆ.

ಅಂದರೆ ಜನರಷ್ಟೇ ಸಲೀಸಾಗಿ ಜನಪ್ರತಿನಿಧಿಗಳು, ಪಕ್ಷಗಳು ಕೂಡ ತಮ್ಮ ತಮ್ಮ ಪಕ್ಷದ ವರ್ಚಸ್ಸಿನ ರೂಪ ಪ್ರತಿರೂಪಗಳನ್ನು ಬಿಂಬಿಸಲು ಸಾಮಾಜಿಕ ಜಾಲತಾಣಗಳಾದ ವಾಟ್ಸ್ಯಾಪ್, ಫೇಸ್‌ಬುಕ್, ಟ್ವಿಟರ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜನರನ್ನು ತಮ್ಮೆಡೆಗೆ ಸೆಳೆಯಲು ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡುತ್ತಿವೆ.

ಅಂತರ್ಜಾಲ, ಮೊಬೈಲ್‌ಗಳ ಬಳಕೆ ಇವುಗಳ ಪರಿಣಾಮಗಳನ್ನು ಅರ್ಥಮಾಡಿಕೊಂಡಿರುವ ಎರಡು ಪಕ್ಷಗಳು ಇವುಗಳ ಮೂಲಕವೇ ಪ್ರಚಾರ ಕೈಗೊಳ್ಳುತ್ತಿವೆ. ಹೆಚ್ಚು ಜನರನ್ನು ತಲುಪಲು ಪ್ರಯತ್ನಿಸಿವೆ. 

2014ರ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿಯ ಗೆಲುವಿನಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸಿತ್ತು. ಇದನ್ನೇ ಈ ಬಾರಿಯೂ ಪ್ರಯೋಗಿಸಲು ಹೊರಟಿರುವ ಎರಡು ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಹ್ಯಾಶ್ ಟ್ಯಾಗ್‌ಗಳ ಮೂಲಕ ಈಗಾಗಲೇ ಹೊಸ ಅಲೆಯನ್ನೇ ಸೃಷ್ಟಿಸಿವೆ.

ಈ ಎರಡು ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಪ್ರಚಾರವನ್ನು ಕೈಗೊಳ್ಳುತ್ತಿದ್ದು, ಗೆಲುವ ಆಕಾಂಕ್ಷೆಯನ್ನು ಹೊರಹಾಕುತ್ತಿವೆ.

ಕಾಂಗ್ರೆಸ್‌ ಮತ್ತು ಸಾಮಾಜಿಕ ಜಾಲತಾಣ:

ಈ ಪಕ್ಷದ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನು ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೊತ್ತಿದ್ದು, ಇವರ ಅಡಿಯಲ್ಲಿ 30 ಸದಸ್ಯರ ತಂಡ ಕಾರ್ಯನಿರ್ವಹಿಸುತ್ತಿದೆ. ಈ ತಂಡ ಪ್ರಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಕಾರ್ಯತಂತ್ರ, ವಿಷಯ ಮತ್ತು ರಚನೆಯನ್ನು ಅಭಿವೃದ್ಧಿಪಡಿಸುವತ್ತ ದೃಷ್ಟಿ ನೆಟ್ಟಿದೆ.

ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ #INC4Karnataka, #KarnatakaDefeatsBJP #JanaAashirwadaYatre #yeddybeda #indiannationalcongress #congresspresident #ModiHitWicket ಈ ಹ್ಯಾಶ್‌ ಟ್ಯಾಗ್‌ಗಳ ಮೂಲಕ ಪ್ರಚಾರ ಕೈಗೊಳ್ಳುತ್ತಿದೆ. ಕಾಂಗ್ರೆಸ್ ಫೇಸ್‌ಬುಕ್‌ನಲ್ಲಿ 3 ಲಕ್ಷ ಬೆಂಬಲಿಗರನ್ನು ಹೊಂದಿದೆ.

#INC4Karnataka

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT