ಶುಕ್ರವಾರ, ಫೆಬ್ರವರಿ 26, 2021
30 °C

ಸ್ವಿಫ್ಟ್‌, ಬಲೆನೊ ಬ್ರೇಕ್‌ ದೋಷ ಸರಿಪಡಿಸಿಕೊಳ್ಳಲು ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ಸ್ವಿಫ್ಟ್‌, ಬಲೆನೊ ಬ್ರೇಕ್‌ ದೋಷ ಸರಿಪಡಿಸಿಕೊಳ್ಳಲು ಸೂಚನೆ

ನವದೆಹಲಿ: ಸ್ವಿಫ್ಟ್ ಮತ್ತು ಬಲೆನೊ ಕಾರುಗಳ ಬ್ರೇಕ್‌ನಲ್ಲಿ ಸಮಸ್ಯೆ ಕಂಡುಬಂದಿದೆ. ಹೀಗಾಗಿ 52,686 ಕಾರುಗಳನ್ನು ಸರಿಪಡಿಸಿಕೊಳ್ಳುವಂತೆ  ಮಾರುತಿ ಸುಜುಕಿ ಇಂಡಿಯಾ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ.

2017ರ ಡಿಸೆಂಬರ್‌ನಿಂದ 2018ರ ಮಾರ್ಚ್ ಅವಧಿಯಲ್ಲಿ ತಯಾರಾಗಿರುವ ಕಾರುಗಳಲ್ಲಿ ಈ ದೋಷ ಕಾಣಿಸಿಕೊಂಡಿದೆ. ಇದನ್ನು ಉಚಿತವಾಗಿ  ಸರಿಪಡಿಸುವ ಅಥವಾ ಬದಲಾಯಿಸುವ ಬಗ್ಗೆ ವಿತರಕರು ಗ್ರಾಹಕರನ್ನು ಸಂಪರ್ಕಿಸಲಿದ್ದಾರೆ ಎಂದು ಹೇಳಿದೆ.

ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆ ಅಲ್ಲದೇ ಇರುವುದರಿಂದ ವಾಹನಗಳನ್ನು ವಾಪಸ್‌ ಕರೆಸಿಕೊಳ್ಳುತ್ತಿಲ್ಲ. ಗ್ರಾಹಕರು ಕಾರನ್ನು ಸರ್ವೀಸ್‌ಗೆ ಬಿಟ್ಟಾಗ ಅದನ್ನು ಸರಿಪಡಿಸಿಕೊಳ್ಳಬಹುದು ಎಂದು ಕಂಪನಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಯಮದ ಪ್ರಕಾರ ತಯಾರಿಕೆಯಲ್ಲಿ ಕಂಡು ಬಂದಿರುವ ದೋಷವನ್ನು ಕಂಪನಿಯು ಉಚಿತವಾಗಿ ಸರಿಪಡಿಸಿ ಕೊಡಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.