ಘನತೆ ಮರೆತ ನಾಯಕ

7

ಘನತೆ ಮರೆತ ನಾಯಕ

Published:
Updated:

ಧರ್ಮ ಧರ್ಮವೆಂದು ಬೊಬ್ಬೆ ಹೊಡೆವ ನಾಯಕ. ಭಾರತೀಯನಾಗಿ ಭಾರತೀಯತೆಯನ್ನು ಮರೆತ ಸಂಸದ. ‘ಅನಂತಕುಮಾರ ಹೆಗಡೆ ಯಾರು?’ ಎಂದು ಹುಡುಕಿದಾಗ ತಿಳಿಯಿತು ಅವರು ಕೇಂದ್ರ ಸಚಿವ! ಅಬ್ಬಬ್ಬಾ ಈ ಯಪ್ಪ ಮಾಡಿರೋ ಸಾಧನೆ ಏನ್ರಿ?! ಸ್ವತಃ ತನ್ನ ನಾಲಿಗೆಯನ್ನೇ ಹಿಡಿತದಲ್ಲಿಟ್ಟುಕೊಳ್ಳದ ಇವರು ತನ್ನ ಕ್ಷೇತ್ರ, ಖಾತೆಯನ್ನು ಅದೇನ್ ಉದ್ಧಾರ ಮಾಡಿದಾರ‍್ರಿ... ಅವರನ್ನ್ಯಾಕೆ ಮಾತನಾಡಲು ಕರೆಸುತ್ತಾರೋ ಆ ಕಾರ್ಯಕ್ರಮ ನಿಯೋಜಕರು.

ಎಲ್ಲಾ ಗಣ್ಯರನ್ನು ಏಕವಚನದಲ್ಲಿ ಸಂಬೋಧಿಸುವ ತಾನೆಷ್ಟು ಯೋಗ್ಯ? ಮುಖ್ಯಮಂತ್ರಿ, ರಾಹುಲ್ ಗಾಂಧಿ ಇರಲಿ... ಸಮಾಜದ ಕಟ್ಟಕಡೆಯ ಮನುಷ್ಯನಿಗೂ ನೀಡಬೇಕಾದ ಗೌರವವನ್ನು ನೀಡಬೇಕು. ಆದರೆ ಸೌಜನ್ಯ, ಸಜ್ಜನಿಕೆ ಅರಿತ ವ್ಯಕ್ತಿಯಿಂದ ಮಾತ್ರ ಅದನ್ನು ನಿರೀಕ್ಷಿಸಬಹುದು.

ಒಂದೇ ದೇಶದಲ್ಲಿದ್ದುಕೊಂಡು ಪಕ್ಷ, ಸಿದ್ಧಾಂತಗಳು ಬೇರೆಯಾದ ಮಾತ್ರಕ್ಕೆ ಅನ್ಯರನ್ನು ನಿಕೃಷ್ಟವಾಗಿ ನಿಂದಿಸಿಕೊಂಡು ವಾಗ್ದಾಳಿ ನಡೆಸುವುದಕ್ಕೆ ಇವರಿಗೆ ಬಿಟ್ಟಿ ಹಕ್ಕು ನೀಡಿದವರು ಯಾರು? ಕೀಳು ಅಭಿರುಚಿಯ ಮಾತು, ಆರೋಪಗಳನ್ನು ಜನರಿಗೆ ಅಸಹ್ಯ ಎನಿಸುವ ರೀತಿಯಲ್ಲಿ ಮಂಡಿಸುವ ಧಾಟಿಯಿಂದ ಅನಂತಕುಮಾರ ಹೆಗಡೆ ಹೊರಬರಲು ಅವರ ‘ಧರ್ಮದೇವತೆ’ ಬುದ್ಧಿ ನೀಡಲಿ.

-ಚಂಪಕ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry