ಬಂಟ್ವಾಳ: ಐಟಿ ದಾಳಿ, ನಗದು ಸಹಿತ ಇಬ್ಬರು ವಶಕ್ಕೆ

7

ಬಂಟ್ವಾಳ: ಐಟಿ ದಾಳಿ, ನಗದು ಸಹಿತ ಇಬ್ಬರು ವಶಕ್ಕೆ

Published:
Updated:

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಹೋಟೆಲ್‌ ಒಂದಕ್ಕೆ ಮಂಗಳವಾರ ರಾತ್ರಿ ದಿಢೀರ್ ದಾಳಿ ನಡೆಸಿ ರಾಜಕೀಯ ಪಕ್ಷವೊಂದಕ್ಕೆ ಸೇರಿದವರು ಎನ್ನಲಾದ ಇಬ್ಬರನ್ನು ನಗದು ಸಹಿತ ವಶಕ್ಕೆ ಪಡೆದ್ದಾರೆ.

ಇಲ್ಲಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಳಿ ಹೋಟೆಲೊಂದರಲ್ಲಿ ಏಳು ಕೋಣೆಗಳನ್ನು ಕಾದಿರಿಸಿದ್ದ ಇವರ ಬಳಿ ಮತದಾರರಿಗೆ ಹಂಚಲು ಸಿದ್ಧಪಡಿಸಿದ್ದರು ಎನ್ನಲಾದ ₹28 ಲಕ್ಷ ನಗದನ್ನು ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ದಾಳಿ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಾಜಕಾರಣಿಗಳಲ್ಲಿ ಆತಂಕ ಮೂಡಿಸಿದೆ ಎಂಬ ಮಾತು ಕೇಳಿ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry