ಭಾರಿ ಮಳೆ: ಮನೆ ಕುಸಿತ

ಎಚ್.ಡಿ.ಕೋಟೆ: ತಾಲ್ಲೂಕಿನ ಕುರ್ಣಿಗಾಲ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆ ಸಂಪೂರ್ಣವಾಗಿ ಕುಸಿದಿದ್ದು ಕುಟುಂಬ ವೊಂದು ಬೀದಿ ಪಾಲಾಗಿದೆ.
ಗ್ರಾಮದ ರತ್ನಮ್ಮ ಎಂಬುವರ ಮನೆ ಕುಸಿದಿದೆ. ಮಳೆಯಿಂದಾಗಿ ಮನೆಯ 3 ಕಡೆಯ ಗೋಡೆ ಹಾಗೂ ಚಾವಣಿ ನೆಲಕ್ಕುರುಳಿದ್ದು, ಮನೆಯಲ್ಲಿದ್ದ 2 ಹಸುಗಳು ಹಾಗೂ ರತ್ನಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
‘ನನ್ನ ಮನೆ ಬೀಳುವ ಹಂತದಲ್ಲಿದ್ದು ಆಶ್ರಯ ಮನೆ ಯೋಜನೆಯಡಿ ಮನೆ ನೀಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಗ್ರಾಮಪಂಚಾಯತಿ ಸದಸ್ಯರಿಗೆ ಮನವಿ ಮಾಡಿದ್ದೆ. ಕೊಡುತ್ತೇವೆಂದು ಭರವಸೆ ನೀಡಿದ್ದರು. ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೂ ಮನವಿ ಸಲ್ಲಿಸಿದ್ದೆ. ಎಷ್ಟೇ ಪ್ರಯತ್ನಿಸಿದರೂ ಮನೆ ನೀಡಲ್ಲಿಲ್ಲ. ಈಗ ಮನೆ ಕಳೆದುಕೊಂಡಂತಾಗಿದೆ ಎಂದು ರತ್ನಮ್ಮ ಅಳಲು ತೋಡಿ ಕೊಂಡರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.