ಗುರುವಾರ , ಫೆಬ್ರವರಿ 25, 2021
17 °C

ಸೋನಮ್‌ ಮದುವೆಯಲ್ಲಿ ರಣಬೀರ್‌– ಅಲಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋನಮ್‌ ಮದುವೆಯಲ್ಲಿ ರಣಬೀರ್‌– ಅಲಿಯಾ

‘ಬ್ರಹ್ಮಾಸ್ತ್ರ’ ಜೋಡಿ ಅಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಗಾಳಿಸುದ್ದಿ ಅನೇಕ ದಿನಗಳಿಂದ ಬಾಲಿವುಡ್‌ನಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ ನಟಿ ಸೋನಮ್‌ ಮದುವೆಯಲ್ಲಿ ಒಟ್ಟಾಗಿ ಬಂದು ಈ ಸುದ್ದಿ ಹೌದೇನೋ ಎಂದು ನೋಡುವಂತೆ ಮಾಡಿದೆ ಈ ಜೋಡಿ.

ಸೋನಮ್‌ ಮದುವೆಯಲ್ಲಿ ತೆಗೆಸಿಕೊಂಡ ರಣಬೀರ್‌ ಕಪೂರ್‌ ಜೊತೆಗಿನ ಫೋಟೊವನ್ನು ಅಲಿಯಾ ಭಟ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಒಂದು ದಿನದಲ್ಲಿ 15 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಈ ಫೋಟೊಗೆ ಆಲಿಯಾ ಸಹೋದರಿ ಮೊದಲ ಕಮೆಂಟ್‌ ಮಾಡಿದ್ದು, ಅವರು ಹೃದಯಕ್ಕೆ ಬಾಣ ಚುಚ್ಚಿರುವ ಸಿಂಗಲ್‌ ಇಮೋಜಿ ಹಾಕಿದ್ದಾರೆ. ಸಹೋದರಿಯೇ ಅಂತಹ ಇಮೋಜಿ ಹಾಕಿದ್ದರಿಂದ ರಣಬೀರ್‌– ಅಲಿಯಾ ಪ್ರೇಮಿಗಳಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

ಈ ಫೋಟೊಗೆ ನಟಿಯರಾದ ದಿಯಾ ಮಿರ್ಜಾ, ಮೌನಿ ರಾಯ್‌, ಬಿಪಾಶಾ ಬಸು ಸೇರಿದಂತೆ ಅನೇಕ ಮಂದಿ ಕಮೆಂಟ್‌ ಹಾಕಿದ್ದಾರೆ. ಸವ್ಯಸಾಚಿ ವಿನ್ಯಾಸದ ಉಡುಗೆಯಲ್ಲಿ ಮಿಂಚುತ್ತಿರುವ ಅಲಿಯಾ ಭಟ್‌ ಇದೇ ಮೊದಲ ಬಾರಿಗೆ ರಣಬೀರ್‌ ಕಪೂರ್‌ ಜೊತೆ ಕಾಣಿಸಿಕೊಳ್ಳುತ್ತಿರುವುದಲ್ಲ. ಕಳೆದ ವಾರ ‘ರಾಝಿ’ ಚಿತ್ರ ಪ್ರದರ್ಶನಕ್ಕೆ ಈ ಜೋಡಿ ಒಟ್ಟಾಗಿ ಬಂದಿದ್ದರು. ಆ ಫೋಟೊಗಳು ಸಹ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.