ಶನಿವಾರ, ಮಾರ್ಚ್ 6, 2021
18 °C

‘ಬೆಟ್ಟದ ದಾರಿ’ ಹಾಡುಗಳ ಚಿತ್ರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬೆಟ್ಟದ ದಾರಿ’ ಹಾಡುಗಳ ಚಿತ್ರೀಕರಣ

ಹೀರಾಲಾಲ್‌ ಮೂವೀಸ್ ಲಾಂಛನದಲ್ಲಿ ಚಂದ್ರಕಲಾ ಟಿ.ಆರ್. ಹಾಗೂ ಮಂಜುನಾಥ್ ನಾಯಕ್ ‘ಬೆಟ್ಟದ ದಾರಿ’ ಚಿತ್ರ ನಿರ್ಮಿಸುತ್ತಿದ್ದಾರೆ.

ಇತ್ತೀಚೆಗೆ ಆಲಮಟ್ಟಿ, ದೇವರ ಹಿಪ್ಪರಗಿ, ಹಿತ್ನಾಳ್, ಇಂಗಳೇಶ್ವರ, ಸುತ್ತಮುತ್ತ ‘ಬೆಳ್ಳಕ್ಕಿ ಸಾಲಂತೆ ಹಾರಾಡೋ ಆಸೆ ಈಗ, ಬದುಕೇ ಕಸಿದ ಪಾಪಿ ನೀನ್ಯಾರೋ’ ಎಂಬ ಹಾಡು ಸೇರಿದಂತೆ ಒಟ್ಟು 4 ಹಾಡುಗಳ ಚಿತ್ರೀಕರಣ ನಡೆಯಿತು. ಇದರೊಂದಿಗೆ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಮಾ. ಚಂದ್ರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಂದಕುಮಾರ್‌ ಅವರ ಛಾಯಾಗ್ರಹಣ ಇರುವ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಅರ್ಜುನ್ (ಕಿಟ್ಟಿ) ಅವರ ಸಂಕಲನವಿದೆ. ವಿ. ನಾಗೇಂದ್ರಪ್ರಸಾದ್, ಕೆ. ಕಲ್ಯಾಣ್ ಹಾಗೂ ವಿಜಯ್ ಭರಮಸಾಗರ ಅವರ ಸಾಹಿತ್ಯವಿದೆ.

ಮಾಸ್ಟರ್ ನಿಶಾಂತ್ ಟಿ. ರಾಥೋಡ್, ಮಾಸ್ಟರ್ ರಂಗನಾಥ್ ಯಾದವ್, ಮಾಸ್ಟರ್ ರೋಹಿತ್, ಮಾಸ್ಟರ್ ವಿಘ್ನೇಶ್, ಬೇಬಿ ಮಾನ್ಯತಾ ಎಂ. ನಾಯಕ್, ಮನ್‌ದೀಪ್ ರಾಯ್, ರಮೇಶ್ ಭಟ್, ಉಮೇಶ್, ಮೈಸೂರ್ ಮಲ್ಲೇಶ್, ಆರ್. ನಾಗೇಶ್, ರಿಕ್ಕಿ, ಅಂಜಲಿ, ಮಂಜುಳಾ ರೆಡ್ಡಿ ತಾರಾಗಣದಲ್ಲಿದ್ದಾರೆ.

ಇದು ಹಳ್ಳಿ ಮಕ್ಕಳ ಸಾಹಸದ ಕಥನ ಹೊಂದಿರುವ ಚಿತ್ರ. ಶಿವಗಂಗೆ, ಚನ್ನಪಟ್ಟಣ, ವಿಜಯಪುರ ಹಾಗೂ ಹುತ್ತನಾಳ್ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.