ದಾಳಿಯಲ್ಲಿ ₹ 31.50 ಕೋಟಿ ವಶ

7
ಇದುವರೆಗಿನ ದಾಳಿ

ದಾಳಿಯಲ್ಲಿ ₹ 31.50 ಕೋಟಿ ವಶ

Published:
Updated:
ದಾಳಿಯಲ್ಲಿ ₹ 31.50 ಕೋಟಿ ವಶ

ಬೆಂಗಳೂರು: ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೂ ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿಗಳಲ್ಲಿ ಒಟ್ಟು ₹ 31.50 ಕೋಟಿ ಅಕ್ರಮ ನಗದು, ₹ 5.83 ಕೋಟಿ ಮೊತ್ತದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

2013ರ ಚುನಾವಣೆಗೆ ಹೋಲಿಸಿದರೆ, ಜಪ್ತಿ ಮಾಡಿರುವ ಹಣ ಮತ್ತು ಆಭರಣ ಆರು ಪಟ್ಟು ಹೆಚ್ಚಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ಕಣ್ಣಿಡುವ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲೂ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡ ನಿರಂತರವಾಗಿ ದಾಳಿ ನಡೆಸುತ್ತಿದೆ. ದಾಳಿಗೆ ಸಂಬಂಧಿಸಿದಂತೆ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry