ಎಲ್ಲ ಮದ್ಯದಂಗಡಿಗಳು ಬಂದ್

7

ಎಲ್ಲ ಮದ್ಯದಂಗಡಿಗಳು ಬಂದ್

Published:
Updated:

ನಾನು ಸಿ.ಎಂ. ಆದರೆ ಮೊದಲು ಮಾಡುವ ಕೆಲಸ, ರಾಜ್ಯದಲ್ಲಿರುವ ಎಲ್ಲ ಮದ್ಯಪಾನ ಅಂಗಡಿಗಳನ್ನು ಮುಚ್ಚುವುದು ಮತ್ತು ಎಲ್ಲ ಖಾಸಗಿ ಶಾಲೆಗಳನ್ನು ಸರ್ಕಾರಿ ಸ್ವಾಮ್ಯಕ್ಕೆ ಒಳಪಡಿಸುವುದು. ಭ್ರಷ್ಚಾಚಾರ ಮುಕ್ತ ರಾಜ್ಯ ಮಾಡಲು ಶ್ರಮಿಸುತ್ತೇನೆ. ರಾಜ್ಯದ ಎಲ್ಲ ನಗರ, ಪಟ್ಟಣ ಮತ್ತು ಗ್ರಾಮಗಳಿಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತೇನೆ.

ಇವಷ್ಟೇ ಅಲ್ಲ, ಸುಸಜ್ಜಿತ ರಸ್ತೆಗಳು, ಬೀದಿ ದೀಪಗಳು, ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದು, ಮಾಲಿನ್ಯ ತಡೆಗಟ್ಟಿ ಪರಿಸರವನ್ನು ಸಂರಕ್ಷಿಸಿ ಎಲ್ಲ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡುತ್ತೇನೆ.

ರೈತರು ಈ ದೇಶದ ಬೆನ್ನೆಲೆಬು ಇದ್ದಂತೆ, ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗದಂತೆ ದಿನದ 24 ಗಂಟೆಯೂ ಉಚಿತ ವಿದ್ಯುತ್ ಪೂರೈಸುತ್ತೇನೆ.

 –ಎಂ.ಟಿ. ಅನಂತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry