ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲವೆಡೆ ಬಸ್‌ ಸಂಚಾರ ರದ್ದು

Last Updated 11 ಮೇ 2018, 5:33 IST
ಅಕ್ಷರ ಗಾತ್ರ

ಬೆಳಗಾವಿ: ‘ಮೇ 12ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಕೆಲಸಕ್ಕೆ ಬಸ್‌ಗಳನ್ನು ಪೂರೈಸುವುದರಿಂದ 11 ಹಾಗೂ 12 ರಂದು ವಿವಿಧ ಘಟಕ ಮತ್ತು ಬಸ್ ನಿಲ್ದಾಣಗಳಿಗೆ ಕಾರ್ಯಾಚರಣೆಯಾಗುವ ಕೆಲ ಮಾರ್ಗಗಳ ಬಸ್‌ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಬೆಳಗಾವಿ ವಿಭಾಗ ದಿಂದ ಚುನಾವಣಾ ಕಾರ್ಯಕ್ಕೆ 307 (ಚುನಾವಣಾ ಕಾರ್ಯಕ್ಕೆ-204 ಮತ್ತು ಪೊಲೀಸ್ ಇಲಾಖೆಗೆ- 103) ವಾಹನಗಳನ್ನು ಪೂರೈಸಲಾಗುತ್ತದೆ. ಆದ್ದರಿಂದ ವಿಭಾಗದ ಬೆಳಗಾವಿ, ಬೈಲಹೊಂಗಲ, ರಾಮದುರ್ಗ ಮತ್ತು ಖಾನಾಪುರ ಬಸ್ ನಿಲ್ದಾಣಗಳಿಂದ ಕಾರ್ಯಾಚರಣೆಯಾಗುವ ಕೆಲ ಮಾರ್ಗಗಳ ಸಾರಿಗೆ ಸಂಚಾರ ಕಡಿಮೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿಯಿಂದ ಹುಬ್ಬಳ್ಳಿ, ಧಾರವಾಡ, ಸನ್ನತ್ತಿ, ವಿಜಯಪುರ, ಗುಡ್ಡಾಪುರ, ಗೋಕಾಕ, ಹಿಡಕಲ್, ಪಾಶ್ಚಾಪುರ, ಬೈಲಹೊಂಗಲಗಳ ಬಸ್‌ ಸಂಚಾರ ಕಡಿಮೆಯಾಗಲಿವೆ.

ಸಿಬಿಟಿಯಿಂದ ನಗರ/ ಉಪನಗರಗಳಾದ ಅನಗೋಳ, ವಡಗಾಂವ, ಮಜಗಾಂವ, ವಂಟಮೂರಿ, ಕಣಬರಗಿ, ರಣಕುಂಡೆ, ಚಂದನಹೊಸೂರ, ಸುಳೇಭಾವಿ, ರಾಣಿಚೆನ್ನಮ್ಮಾ ವಿಶ್ವವಿದ್ಯಾಲಯ, ಹೊನಗಾ, ಯಳ್ಳೂರ, ಉಚಗಾಂವಗಳಿಗೆ ಬಸ್‌ ಸಂಚಾರ ಕಡಿಮೆಯಾಗಲಿವೆ.

ಬೈಲಹೊಂಗಲದಿಂದ ಧಾರವಾಡ, ಯರಗಟ್ಟಿ, ಮುನವಳ್ಳಿ, ನೇಸರಗಿ, ಬೆನಕಟ್ಟಿ, ಬೆಳಗಾವಿ, ಇಟಗಿರೋಡ, ಕಿತ್ತೂರು, ಹೊಳೆನಾಗಲಾಪುರ, ಪಟ್ಟಿಹಾಳ, ಗೊಡಚಿ, ಸವಟಗಿ, ಅಂಬಡಗಟ್ಟಿ, ಎಳಪಟ್ಟಿ, ತುರಮುರಿಗಳ ಬಸ್‌ ಸಂಚಾರಕ್ಕೂ ಅಡಚಣಿಯಾಗಲಿದೆ.

ರಾಮದುರ್ಗದಿಂದ ಮೆಳ್ಳಿಕೇರಿ, ಹಿರೆಕೊಪ್ಪ, ಹೊಸೂರ, ಕೊಣ್ಣೂರ, ಕುಳಗೇರಿ, ಮೂಲಂಗಿ, ಯಾದವಾಡ, ಅನವಾಲ, ಲಕ್ಕನಾಯಕನಕೊಪ್ಪ-ಎಸ್, ರಡ್ಡರ ತಿಮ್ಮಾಪುರ, ಗೊಣಗನೂರ ಗ್ರಾಮಗಳ ಬಸ್‌ ಸೌಲಭ್ಯಕ್ಕೆ ಅಡಚಣಿಯಾಗಲಿದೆ.

ಖಾನಾಪುರದಿಂದ ಇಟಗಿ ಕ್ರಾಸ್, ಬಿದರಬಾವಿ, ಚಿಕಲಾ, ಪಾರವಾಡ, ಘೊಡಗೇರಿ, ಬೀಡಿ. ಕಿತ್ತೂರುಗಳ ಬಸ್‌ಗಳೂ ಕಡಿಮೆಯಾಗಲಿವೆ.

ಈ ಮಾರ್ಗಗಳಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳು ಇರುವುದರಿಂದ ಕೆಲ ಬಸ್‌ಗಳ ಸಂಚಾರ ರದ್ದುಪಡಿಸಲಾಗಿದೆ.

ಬೆಳಗಾವಿ ವಿಭಾಗದ ವ್ಯಾಪ್ತಿಯ ಎಲ್ಲ ಮಾರ್ಗಗಳಿಗೆ ಕನಿಷ್ಠ ಮಟ್ಟದ ಸೇವೆಯನ್ನು ಒದಗಿಸಲಾಗುವುದು. ಯಾವುದೇ ಮಾರ್ಗಗಳು ಸೇವಾ ರಹಿತವಾಗಿರದಂತೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಚುನಾವಣೆಯಂದು ಸಾರ್ವತ್ರಿಕ ರಜೆ, ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಆದ್ದರಿಂದ ಬಸ್‌ ಸಾರಿಗೆ ಕಡಿಮೆ ಮಾಡುವುದರಿಂದ ಹೆಚ್ಚಿನ ಜನರಿಗೆ ತೊಂದರೆ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT