ಮಲೇಷ್ಯಾ: ಅನ್ವರ್‌ ಇಬ್ರಾಹಿಂಗೆ ಕ್ಷಮಾದಾನಕ್ಕೆ ಒಪ್ಪಿಗೆ

7

ಮಲೇಷ್ಯಾ: ಅನ್ವರ್‌ ಇಬ್ರಾಹಿಂಗೆ ಕ್ಷಮಾದಾನಕ್ಕೆ ಒಪ್ಪಿಗೆ

Published:
Updated:
ಮಲೇಷ್ಯಾ: ಅನ್ವರ್‌ ಇಬ್ರಾಹಿಂಗೆ ಕ್ಷಮಾದಾನಕ್ಕೆ ಒಪ್ಪಿಗೆ

ಕ್ವಾಲಾಲಂಪುರ: ಜೈಲಿನಲ್ಲಿರುವ ಪ್ರತಿಪಕ್ಷ ಮುಖಂಡ ಅನ್ವರ್ ಇಬ್ರಾಹಿಂ ಅವರಿಗೆ ಕ್ಷಮಾದಾನ ನೀಡಲು ಮಲೇಷ್ಯಾ ದೊರೆ ಒಪ್ಪಿಕೊಂಡಿದ್ದಾರೆ ಎಂದು ನೂತನ ಪ್ರಧಾನಿ ಮಹತಿರ್ ಮೊಹಮದ್ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಪ್ರತಿಪಕ್ಷ ಜಯಭೇರಿ ಬಾರಿಸಿದ್ದು, ಅನ್ವರ್ ಅವರಿಗೆ ಪ್ರಧಾನಿ ಹುದ್ದೆಯನ್ನು ಹಸ್ತಾಂತರ ಮಾಡಲು ಮಹತಿರ್ ನಿರ್ಧರಿಸಿದ್ದಾರೆ. ಜಗತ್ತಿನ ಅತಿ ಹಿರಿಯ ಪ್ರಧಾನಿಯಾಗಿ ಮಹತಿರ್ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದರು.

ಅನ್ವರ್ ಅವರು ಪೀಪಲ್ಸ್ ಜಸ್ಟೀಸ್ ಪಾರ್ಟಿ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟದ ಪ್ರಮುಖ ನಾಯಕರಾಗಿದ್ದಾರೆ. ನಜೀಬ್ ಅವರ ಸರ್ಕಾರದ ಅವಧಿಯಲ್ಲಿ 2015ರಲ್ಲಿ ಅನ್ವರ್ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಇದು ರಾಜಕೀಯ ಪ್ರೇರಿತ ಎಂದು ಟೀಕೆಗೆ ಗುರಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry