ಇಂದೋರ್: ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಐಪಿಎಲ್‌ನ ಶನಿವಾರ ಸಂಜೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಮುಂಬೈ ಇಂಡಿಯನ್ಸ್ ಎದುರಿನ ಕಳೆದ ಪಂದ್ಯದಲ್ಲಿ 102 ರನ್‌ಗಳಿಂದ ಸೋತಿರುವ ಕೋಲ್ಕತ್ತ ನೈಟ್ ರೈಡರ್ಸ್ ಗೆಲುವಿನ ಲಯಕ್ಕೆ ಮರಳಲು ಈ ಪಂದ್ಯದಲ್ಲಿ ಶ್ರಮಿಸಲಿದೆ. ಆದರೆ ಈ ಕನಸು ನಸಾಗಬೇಕಾದರೆ ತಂಡದ ಬ್ಯಾಟಿಂಗ್ ವಿಭಾಗ ಮೈಕೊಡವಿ ಮೇಲೇಳಬೇಕಾದ ಅಗತ್ಯವಿದೆ. 11 ಪಂದ್ಯಗಳಿಂದ 10 ಪಾಯಿಂಟ್ ಸಂಪಾದಿಸಿರುವ ಕೋಲ್ಕತ್ತ ತಂಡದ ಪ್ಲೇ ಆಫ್ ಹಂತಕ್ಕೇ ಏರಬೇಕಾದರೆ ಶನಿವಾರ ಜಯ ಗಳಿಸಲೇಬೇಕಾದ ಅನಿವಾರ್ಯ ಸ್ಥಿತಿ ಇದೆ.

ಕಿಂಗ್ಸ್ ಇಲೆವನ್ ತಂಡ ಕೂಡ ಕಳೆದ ಪಂದ್ಯದಲ್ಲಿ ನೀರಸ ಆಟವಾಡಿತ್ತು. ರಾಜಸ್ತಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ 159 ರನ್‌ಗಳ ಗುರಿ ಬನ್ನತ್ತಲು ಸಾಧ್ಯವಾಗದೆ 15 ರನ್‌ಗಳ ಸೋಲು ಕಂಡಿತ್ತು. ಹೀಗಾಗಿ ಈ ತಂಡವೂ ಶನಿವಾರದ ಪಂದ್ಯದಲ್ಲಿ ಪುಟಿದೇಳಲು ಶ್ರಮಿಸಲಿದೆ.

10 ಪಂದ್ಯಗಳಿಂದ 12 ಪಾಯಿಂಟ್ ಗಳಿಸಿರುವ ಕಿಂಗ್ಸ್ ತಂಡ ಈಗ ಇಕ್ಕಟ್ಟಿನ ಸ್ಥಿತಿಯಲ್ಲಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡ ಸುಲಭವಾಗಿ ಪ್ಲೇ ಆಫ್ ಹಂತಕ್ಕೇರಲಿದೆ. ಇಲ್ಲವಾದರೆ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಲು ಮುಂಬೈ ಇಂಡಿಯನ್ಸ್‌ಗೆ ಅವಕಾಶ ಸಿಗಲಿದೆ.

ರಾಹುಲ್–ಗೇಲ್ ಭರವಸೆ: ಕಿಂಗ್ಸ್ ಇಲೆವನ್ ಆರಂಭಿಕ ಜೋಡಿಯಾದ ಕೆ.ಎಲ್.ರಾಹುಲ್ ಮತ್ತು ಕ್ರಿಸ್ ಗೇಲ್ ಮೇಲೆ ಭರವಸೆ ಇರಿಸಿಕೊಂಡಿದೆ. ರಾಹುಲ್ 10 ಪಂದ್ಯಗಳಿಂದ 471 ರನ್ ಗಳಿಸಿದ್ದು ಗೇಲ್ ಏಳು ಪಂದ್ಯಗಳಿಂದ 311 ರನ್ ಕಲೆ ಹಾಕಿದ್ದಾರೆ.

ಕರುಣ್ ನಾಯರ್ ಕೂಡ ಕೆಲವು ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಿದ್ದಾರೆ. ಮಯಂಕ್ ಅಗರವಾಲ್, ಯುವರಾಜ್ ಸಿಂಗ್ ಮುಂತಾದವರು ಒಳಗೊಂಡಂತೆ ಇತರ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡಿರುವುದು ತಂಡದ ನಿರಾಸೆಗೆ ಕಾರಣವಾಗಿದೆ.

ಕೆಕೆಆರ್ ತಂಡದಲ್ಲೂ ಬ್ಯಾಟ್ಸ್‌ಮನ್‌ಗಳು ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ನಾಯಕ ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ಮುಂತಾದವರಿಗೆ ನಿರಂತರವಾಗಿ ಮಿಂಚಲು ಆಗುತ್ತಿಲ್ಲ. ಆರಂಭದಲ್ಲಿ ಉತ್ತಮವಾಗಿ ಅಡಿದ ಸುನಿಲ್ ನಾರಾಯಣ್ ನಂತರ ನಿರಾಸೆ ಮೂಡಿಸಿದ್ದಾರೆ.

ಪಂದ್ಯ ಆರಂಭ: ಸಂಜೆ 4.00
ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.