ಜೋಸೆಫ್‌ಗೆ ಬಡ್ತಿ ಶಿಫಾರಸು: ಮರಳಿ ಕಳಿಸಲು ನಿರ್ಧಾರ

7

ಜೋಸೆಫ್‌ಗೆ ಬಡ್ತಿ ಶಿಫಾರಸು: ಮರಳಿ ಕಳಿಸಲು ನಿರ್ಧಾರ

Published:
Updated:
ಜೋಸೆಫ್‌ಗೆ ಬಡ್ತಿ ಶಿಫಾರಸು: ಮರಳಿ ಕಳಿಸಲು ನಿರ್ಧಾರ

ನವದೆಹಲಿ: ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ಮಾಡಿರುವ ಶಿಫಾರಸನ್ನು ಕೇಂದ್ರಕ್ಕೆ ಮರಳಿ ಕಳುಹಿಸಲು ಕೊಲಿಜಿಯಂ (ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸದಸ್ಯರಾಗಿರುವ ಶಿಫಾರಸು ಸಮಿತಿ) ನಿರ್ಧರಿಸಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಕೆಲವು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಬಡ್ತಿ ನೀಡುವ ಶಿಫಾರಸನ್ನು ಕೇಂದ್ರಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಕೆ.ಎಂ. ಜೋಸೆಫ್‌ ಹೆಸರನ್ನೂ ಸೇರಿಸಲು ನಿರ್ಧರಿಸಲಾಗಿದೆ. ಇತರ ಹೆಸರುಗಳನ್ನು ಅಂತಿಮಗೊಳಿಸಲು ಇನ್ನಷ್ಟು ಸಮಯ ಬೇಕಿರುವುದರಿಂದ ತಕ್ಷಣವೇ ಕೆ.ಎಂ. ಜೋಸೆಫ್‌ ಹೆಸರನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದಿಲ್ಲ. ಈ ಬಗ್ಗೆ ಚರ್ಚಿಸಲು 16ರಂದು ಕೊಲಿಜಿಯಂ ಸಭೆ ಸೇರಲಿದೆ.

ಕೆ.ಎಂ. ಜೋಸೆಫ್‌ ಮತ್ತು ಇಂದೂ ಮಲ್ಹೋತ್ರಾರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಜ.10ರಂದು ಕೇಂದ್ರಕ್ಕೆ ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ,ಇಂದೂ ಹೆಸರಿಗೆ ಒಪ್ಪಿಗೆ ಸೂಚಿಸಿದ್ದ ಕೇಂದ್ರ, ಜೋಸೆಫ್‌ ಹೆಸರನ್ನು ಮರು ಪರಿಶೀಲಿಸಲು ಸೂಚಿಸಿತ್ತು. 2016ರಲ್ಲಿ, ಕಾಂಗ್ರೆಸ್‌ ಆಳ್ವಿಕೆ ಇದ್ದ ಉತ್ತರಾಖಂಡದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವ ಕೇಂದ್ರದ ನಿರ್ಧಾರವನ್ನು ಉತ್ತರಾಖಂಡ ಹೈಕೋರ್ಟ್‌ ಪೀಠ ವಜಾ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry