ವಿಜಯನಗರ ತಂಡಕ್ಕೆ ರೋಚಕ ಗೆಲುವು

6

ವಿಜಯನಗರ ತಂಡಕ್ಕೆ ರೋಚಕ ಗೆಲುವು

Published:
Updated:

ಬೆಂಗಳೂರು: ಜೆರಿನ್‌ ಗಳಿಸಿದ ಎರಡು ಗೋಲುಗಳ ಬಲದಿಂದ ವಿಜಯನಗರ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವಿಜಯನಗರ ತಂಡ 3–2 ಗೋಲುಗಳಿಂದ ಅಂಬೇಡ್ಕರ್‌ ತಂಡವನ್ನು ಸೋಲಿಸಿತು.

ವಿಜಯಿ ತಂಡದ ಜೆರಿನ್‌ 15 ಮತ್ತು 54ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ವಿಶಾಲ್‌ 58ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಜಯದ ಅಂತರ ಹೆಚ್ಚಿಸಿದರು.

ಮಹಾರಾಜ ಸೋಷಿಯಲ್ಸ್ ತಂಡ 4–0 ಗೋಲುಗಳಿಂದ ಬೆಂಗಳೂರು ಬಾಯ್ಸ್‌ ವಿರು‌ದ್ಧ ಗೆದ್ದಿತು.

ಮಹಾರಾಜ ತಂಡದ ಸೂರ್ಯ (25ನೇ ನಿಮಿಷ), ದಿಲೀಪನ್‌ (32ನೇ ನಿ.), ಕಿರಣ್‌ (58 ನೇ ನಿ.) ಮತ್ತು ಸತೀಶ್‌ (70ನೇ ನಿ.) ತಲಾ ಒಂದು ಗೋಲು ಬಾರಿಸಿದರು.

ವೆಟರನ್ಸ್‌ ಮತ್ತು ಲಾ ಮಸಿಯಾ ತಂಡಗಳ ನಡುವಣ ದಿನದ ಇನ್ನೊಂದು ಪಂದ್ಯ 1–1 ಗೋಲುಗಳಿಂದ ಡ್ರಾ ಆಯಿತು.

ವೆಟರನ್ಸ್‌ ಪರ ಲಾರೆನ್ಸ್‌ 29ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮಸಿಯಾ ತಂಡದ ಡೆರಿಕ್‌ 57ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಸಮಬಲಕ್ಕೆ ಕಾರಣರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry