7

4 ತಿಂಗಳ ಮಗುವಿನ ಅತ್ಯಾಚಾರ, ಕೊಲೆ ಪ್ರಕರಣ: ಅತ್ಯಾಚಾರಿಗೆ ಮರಣದಂಡನೆ

Published:
Updated:
4 ತಿಂಗಳ ಮಗುವಿನ ಅತ್ಯಾಚಾರ, ಕೊಲೆ ಪ್ರಕರಣ: ಅತ್ಯಾಚಾರಿಗೆ ಮರಣದಂಡನೆ

ಇಂದೋರ್: 4 ತಿಂಗಳ ಮಗುವನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಿದ್ದ ಅಪರಾಧಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಹೀಗಾಗಿ ಪ್ರಕರಣ ದಾಖಲಾದ ಕೇವಲ 23 ದಿನಗಳಲ್ಲೇ ತೀರ್ಪು ಹೊರಬಿದ್ದಂತಾಗಿದೆ.

ಏಪ್ರಿಲ್‌ 20 ರಂದು ಇಲ್ಲಿನ ರಾಜ್‍ವಾಡಾ ಕೋಟೆಯ ಹೊರವಲಯದಲ್ಲಿ ಹೆತ್ತವರೊಂದಿಗೆ ನಿದ್ರಿಸುತ್ತಿದ್ದ 4 ತಿಂಗಳ ಮಗುವನ್ನು ಅಪಹರಿಸಿದ್ದ ಅಪರಾಧಿ ಈ ಕೃತ್ಯವೆಸಗಿದ್ದ.

ಈ ಸಂಬಂಧ 21 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ಆಗ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಇಂದೋರ್‌ ಪೊಲೀಸ್‌ ಉಪ ಮಹಾನಿರ್ದೇಶಕ ಎಚ್‌.ಸಿ.ಮಿಶ್ರಾ, ‘ರಾಜ್‌ವಾಡಾ ಪ್ರದೇಶದ ವಾಣಿಜ್ಯ ಕಟ್ಟಡವೊಂದರ ಕೆಳಮಹಡಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ತಂದೆ–ತಾಯಿ ಜೊತೆ ನಿದ್ರಿಸುತ್ತಿದ್ದ ಮಗುವನ್ನು ಅಪಹರಿಸಿ ಅತ್ಯಾಚಾರಗೈದಿದ್ದ ಸುನೀಲ್‌ ಭೀಲ್‌ ಎಂಬಾತ ಬಳಿಕ ಕೊಲೆ ಮಾಡಿದ್ದ’ ಎಂದು ಹೇಳಿದ್ದರು.

‘ಆರೋಪಿ ಹಾಗೂ ಮೃತ ಮಗುವಿನ ಪೋಷಕರು ಬಲೂನು ವ್ಯಾಪಾರಿಗಳಾಗಿದ್ದಾರೆ’ ಎಂದೂ ಮಿಶ್ರಾ ಹೇಳಿದ್ದರು.

ಏನಿದು ಪ್ರಕರಣ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry