ನಕಲಿ ಮತದಾನಕ್ಕೆ ಯತ್ನ ಮೂವರು ವಶಕ್ಕೆ

7

ನಕಲಿ ಮತದಾನಕ್ಕೆ ಯತ್ನ ಮೂವರು ವಶಕ್ಕೆ

Published:
Updated:

ಪುತ್ತೂರು: ವಿಧಾನಸಭಾ ಕ್ಷೇತ್ರದ ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಆಲಂತಡ್ಕ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಯುವಕನೊಬ್ಬನ್ನು ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿ ಪತ್ತೆ ಹಚ್ಚಿ ಸಂಪ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಕೀರ್ ಎಂಬಾತ ಸಿಕ್ಕಿ ಬಿದ್ದ ವ್ಯಕ್ತಿ. ಶಕೀರ್ ಸಂಜೆ ವೇಳೆ ಆಲಂತಡ್ಕ ಶಾಲೆಯ ಮತದಾನ ಕೇಂದ್ರಕ್ಕೆ ಬಂದು ಇನ್ನೊಬ್ಬ ಮತದಾರನ ಹೆಸರಿನಲ್ಲಿ ನಕಲಿ ಮತದಾನಕ್ಕೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.

ಬಂಟ್ವಾಳ 59ನೇ ಮತಗಟ್ಟೆಯಲ್ಲಿ ಗೈರುಹಾಜರಾದ ಮತದಾರರ ಹೆಸರಲ್ಲಿ ಮತದಾನ ಮಾಡಲು ಯತ್ನಿಸಿದ ಅಸ್ಸಾಂನ ಚೋಸನ್‌ ಚೇಂಜ್‌ (22) ಮತ್ತು ಅಜಯ್‌ ಮಾಕೆಸ್‌ (24) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry