ಮತದಾನಕ್ಕೆ ತೆರಳಿತ್ತಿದ್ದಾಗ ಅಪಘಾತ; ನಾಲ್ಕು ಸಾವು

7

ಮತದಾನಕ್ಕೆ ತೆರಳಿತ್ತಿದ್ದಾಗ ಅಪಘಾತ; ನಾಲ್ಕು ಸಾವು

Published:
Updated:
ಮತದಾನಕ್ಕೆ ತೆರಳಿತ್ತಿದ್ದಾಗ ಅಪಘಾತ; ನಾಲ್ಕು ಸಾವು

ಬೇಲೂರು: ಬೇಲೂರು ತಾಲ್ಲೂಕಿನ ರಾಮೇನಹಳ್ಳಿ ಗ್ರಾಮಸ್ಥರು ಶನಿವಾರ ಮತದಾನ ಮಾಡಲು ಹತ್ತಿರದ ಚಿಲ್ಕೂರು ಮತಗಟ್ಟೆಗೆ ಆಟೊದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ನಾಲ್ವರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ.

ಹಾಸನ ಕಡೆಯಿಂದ ಬಂದ ಲಾರಿ ಆಟೊಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಶಾರದಮ್ಮ (70), ಕಮಲಮ್ಮ (65), ಜಯಲಕ್ಷ್ಮಿ (45) ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡಿದ್ದ ಲಕ್ಷ್ಮೇಗೌಡ (65) ಹಾಸನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry