ವೀಲ್‌ಚೇರ್, ಮೆಟ್ಟಿಲು ಇಲ್ಲದೇ ಪರದಾಡಿದ ವೃದ್ಧರು, ಅಂಗವಿಕಲರು

7

ವೀಲ್‌ಚೇರ್, ಮೆಟ್ಟಿಲು ಇಲ್ಲದೇ ಪರದಾಡಿದ ವೃದ್ಧರು, ಅಂಗವಿಕಲರು

Published:
Updated:
ವೀಲ್‌ಚೇರ್, ಮೆಟ್ಟಿಲು ಇಲ್ಲದೇ ಪರದಾಡಿದ ವೃದ್ಧರು, ಅಂಗವಿಕಲರು

ಎಂ.ಕೆ.ಹುಬ್ಬಳ್ಳಿ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಮತದಾನ ಶಾಂತಿಯುತವಾಗಿ ನಡೆಯಿತು.

ಪಿಂಕ್ ಮತಗಟ್ಟೆ ಸೇರಿದಂತೆ ಒಟ್ಟು 11 ಮತಗಟ್ಟೆಗಳನ್ನು ಪಟ್ಟಣದಲ್ಲಿ ಸ್ಥಾಪಿಸಲಾಗಿತ್ತು. ಬೆಳಿಗ್ಗೆ ಮಂದಗತಿಯಲ್ಲಿ ನಡೆದ ಮತದಾನ, ಮದ್ಯಾಹ್ನದ ನಂತರ ವೇಗ ಪಡೆಯಿತು. ಮತಗಟ್ಟೆಗಳತ್ತ ಬಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಅಂಗವಿಕಲರಿಗಾಗಿ ವೀಲ್‌ಚೇರ್ ವ್ಯವಸ್ಥೆ ಇಲ್ಲದ್ದರಿಂದ ಅಂಗವಿಕಲರು ಅನಿವಾರ್ಯವಾಗಿ ಇತರರ ಆಸರೆ ಪಡೆಯುವಂತಾಯಿತು. ಕೆಲ ಮತಗಟ್ಟೆಗಳ ಒಳ ಪ್ರವೇಶದ ಮೆಟ್ಟಿಲುಗಳ ಬದಲು ಇಳಿಜಾರು ಇದ್ದ ಕಾರಣ ವೃದ್ಧರು ತೊಂದರೆ ಅನುಭವಿಸಿದರು. ಕೆಲ ಮತದಾರರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಅವರು ಮತದಾನದ ಹಕ್ಕಿನಿಂದ ವಂಚಿತರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry