ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಚಟವೇ? ಸ್ಕ್ರೀನ್‌ ಬ್ಲಾಕ್‌ ಆ್ಯಂಡ್‌ ವೈಟ್‌ ಮಾಡಿ

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳ ಬಳಕೆ ಈಗ ಸಿಗರೇಟ್‌ನಂತೆ ಚಟ ಎಂಬಂತಾಗಿದೆ. ತುಂಬ ಮಂದಿ ಈಗ ಸ್ಮಾರ್ಟ್‌ಫೋನ್‌ಗಳನ್ನು ಚೆಕ್‌ ಮಾಡುವುದರಲ್ಲಿಯೇ ಬಹುಸಮಯವನ್ನು ಹಾಳು ಮಾಡುತ್ತಿದ್ದಾರೆ. ಅದರಲ್ಲೂ ಮಕ್ಕಳು ಈ ಚಟ ಅಂಟಿಸಿಕೊಂಡಿರುವುದು ಪೋಷಕರಿಗೆ ತಲೆನೋವಾಗಿದೆ. ಮೊಬೈಲ್‌, ಟ್ಯಾಬ್ಲೆಟ್‌ಗಳಲ್ಲಿ ಬಹು ಸಮಯ ಕಾಲ ಕಳೆಯುವ ಮಕ್ಕಳ ಮಾನಸಿಕ ಆರೋಗ್ಯ ಹೇಗಿರಲಿದೆ ಎಂದು ಅವರ ಯೋಚನೆ.

‘ಮೊಬೈಲ್‌ ಪೋನಿನ ಸ್ಕ್ರೀನ್‌ ಅನ್ನು ಬ್ಲಾಕ್‌ ಆ್ಯಂಡ್‌ ವೈಟ್‌ ಮಾಡುವುದೇ ಇದಕ್ಕೆ ಪರಿಹಾರ ಆಗಬಲ್ಲದು’ ಎಂದು ಗೂಗಲ್‌ನ ನಿವೃತ್ತ ವಿನ್ಯಾಸಕಾರ ಟ್ರಿಸ್ಟನ್‌ ಹ್ಯಾರಿಸ್‌ ಅವರು ತಿಳಿಸಿದ್ದಾರೆ. ‘ಇದು ವೈಜ್ಞಾನಿಕವಾಗಿಯೂ ನಿಜವಾಗಿದೆ. ಫೋನಿನ ಸ್ಕ್ರೀನ್‌ ಬಣ್ಣರಹಿತವಾಗಿದ್ದರೆ  ಪೋನ್‌ಕರೆ, ಮೆಸೇಜು ಬಂದಾಗಲೂ ಅದನ್ನು ನೋಡುವಂತೆ ಮಿದುಳಿನ ನರಕೋಶಗಳು ಉತ್ತೇಜನ ನೀಡಲ್ಲ. ಆಗ ಕ್ರಮೇಣ ಫೋನಿನ ಚಟ ಕಡಿಮೆಯಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಫೋನಿನ ಪರದೆಯಲ್ಲಿನ ಬಣ್ಣಗಳು ಫೋನಿನ ಮೇಲಿನ ಆಕರ್ಷಣೆಯನ್ನು ಹೆಚ್ಚು ಮಾಡುತ್ತದೆ. ಒಂದು ವೇಳೆ ಅದನ್ನು ಆಫ್‌ ಮಾಡಿದ್ದಲ್ಲಿ ದೊಡ್ಡ ವ್ಯತ್ಯಾಸವನ್ನೇ ಮಾಡಬಹುದು’ ಎಂದು ಹ್ಯಾರಿಸ್‌ ತಿಳಿಸಿದ್ದಾರೆ.

ಐಫೋನ್‌ ಅಥವಾ ಆ್ಯಂಡ್ರಾಯ್ಡ್‌ ಫೋನ್‌ಗಳ ಸ್ಕ್ರೀನ್‌ ಅನ್ನು ಬ್ಲಾಕ್‌ ಆ್ಯಂಡ್‌ ವೈಟ್‌ ಆಗಿ ಇಟ್ಟುಕೊಳ್ಳಬಹುದು. ಆದರೆ ಆ ನಿರ್ಧಾರ ಅಷ್ಟು ಸುಲಭದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT