ಗುರುವಾರ , ಫೆಬ್ರವರಿ 25, 2021
26 °C

ಲಾಲೂ ಪುತ್ರನ ವಿವಾಹ ವೇಳೆ ಅತಿಥಿಗಳ ಗಲಾಟೆ; ಭೋಜನಕ್ಕೆ ಮುಗಿಬಿದ್ದ ಜನ ಪಾತ್ರೆಗಳನ್ನೂ ಕದ್ದೊಯ್ದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಲೂ ಪುತ್ರನ ವಿವಾಹ ವೇಳೆ ಅತಿಥಿಗಳ ಗಲಾಟೆ; ಭೋಜನಕ್ಕೆ ಮುಗಿಬಿದ್ದ ಜನ ಪಾತ್ರೆಗಳನ್ನೂ ಕದ್ದೊಯ್ದರು!

ಪಟನಾ: ಆರ್‍‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮದುವೆ ಅದ್ಧೂರಿಯಾಗಿಯೇ ನಡೆದಿತ್ತು. ಅಲ್ಲಿ ಬಂದ ವಿಶೇಷ ಅತಿಥಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಎರಡು ರೀತಿಯ ಭೋಜನ ಏರ್ಪಡಿಸಲಾಗಿತ್ತು.

ಈ ನಡುವೆ ಸಾಮಾನ್ಯ ಅತಿಥಿಗಳ ಗುಂಪಿನಲ್ಲೊಬ್ಬರು ವಿಐಪಿಗಳಿಗೆ ನೀಡುವ  ಭೋಜನ ಅದೆಷ್ಟು ರುಚಿಯಿದೆ ಎಂಬುದು ಗೊತ್ತೇ? ಎಂದು ಕೇಳಿದ್ದೇ ತಡ  ಜನರು ಒಂದೇ ಸಮನೆ ವಿಐಪಿಗಳ ಭೋಜನಗೃಹಕ್ಕೆ ನುಗ್ಗಿದ್ದಾರೆ. 

ಆಮೇಲೆ ಅಲ್ಲಿದ್ದ ಆಹಾರವನ್ನು ಕಬಳಿಸಿದ್ದು ಮಾತ್ರವಲ್ಲದೆ ಅಲ್ಲಿನ ಪಾತ್ರೆಗಳನ್ನೂ ಕದ್ದೊಯ್ದಿದ್ದಾರೆ. ನೂಕು ನುಗ್ಗಲು ಜಾಸ್ತಿಯಾಗುತ್ತಿದ್ದಂತೆ ಕೆಲವರು ಮೇಜು ಕುರ್ಚಿಗಳನ್ನು ಎಸೆದು  ಪುಡಿ ಮಾಡಿದ್ದಾರೆ.

ಈ ಗದ್ದಲದಲ್ಲಿ ಸರಿ ಸುಮಾರು 2,000 ಪ್ಲೇಟ್‍ಗಳು ಪುಡಿಯಾಗಿದ್ದು, ಹಲವಾರು ಪಾತ್ರೆಗಳು ಕಳವು ಆಗಿವೆ ಎಂದು ಕೆಟರಿಂಗ್‍ನವರು ಹೇಳಿದ್ದಾರೆ. ಲಾಲೂ ಮಗನ ಮದುವೆಯಲ್ಲಿ ನಡೆದ ಗದ್ದಲದ ವಿಡಿಯೊ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. 

ತೇಜ್ ಪ್ರತಾಪ್ ಅವರು ಆರ್‍‍ಜೆಡಿ ಶಾಸಕಿ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯಾ ರಾಯ್ ಅವರನ್ನು ವಿವಾಹವಾಗಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.