ದಲಿತ ವ್ಯಕ್ತಿ ಕೊಲೆ; ಶವ ಇಟ್ಟು ಪ್ರತಿಭಟನೆ

7

ದಲಿತ ವ್ಯಕ್ತಿ ಕೊಲೆ; ಶವ ಇಟ್ಟು ಪ್ರತಿಭಟನೆ

Published:
Updated:
ದಲಿತ ವ್ಯಕ್ತಿ ಕೊಲೆ; ಶವ ಇಟ್ಟು ಪ್ರತಿಭಟನೆ

ಕೆಂಭಾವಿ (ಯಾದಗಿರಿ ಜಿಲ್ಲೆ): ಸಮೀಪದ ಅಗತೀರ್ಥ ಗ್ರಾಮದಲ್ಲಿ ದಲಿತ ವ್ಯಕ್ತಿ ನಂದಪ್ಪ ಭೀಮಪ್ಪ ದೊಡಮನಿ (48) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮಾಜಿ ಸಚಿವ ರಾಜುಗೌಡ ನೇತೃತ್ವದಲ್ಲಿ ಸಂಬಂಧಿಕರು ಭಾನುವಾರ ಇಲ್ಲಿಯ ಪೊಲೀಸ್‌ ಠಾಣೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

‘ನಂದಪ್ಪ ಅವರ ಮಗ ಮಲ್ಲಪ್ಪನಿಗೆ ಕೆಲ ದಿನಗಳ ಹಿಂದೆ ನಾನಾಗೌಡ ಪಾಟೀಲ ಎಂಬುವವರಟ್ರ್ಯಾಕ್ಟರ್‌ ಡಿಕ್ಕಿ ಹೊಡೆದು ಗಂಭೀರ ಗಾಯಗಳಾಗಿದ್ದವು. ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆಸಿ, ಮಲ್ಲಪ್ಪನ ಚಿಕಿತ್ಸೆಗಾಗಿ ಹಣ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ನಂದಪ್ಪ ಅವರು ಹಣ ಕೇಳಲು ಶನಿವಾರ ಸಂಜೆ ಹೋದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ’ ಎಂದು ಸಂಬಂಧಿಕರು ಆರೋಪಿಸಿದರು.

‘ನಂದಪ್ಪ ಸಾವಿನಿಂದ ಅವರ ಕುಟುಂಬ ಬೀದಿಗೆ ಬಿದ್ದಿದೆ. ಕೂಡಲೇ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry