ಶನಿವಾರ, ಫೆಬ್ರವರಿ 27, 2021
31 °C
ಟಾಲಿವುಡ್‌

ಮೇಡಂ ಟುಸ್ಸಾಡ್ಸ್‌ನಲ್ಲಿ ‘ಪ್ರಿನ್ಸ್‌’ ಪ್ರತಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಡಂ ಟುಸ್ಸಾಡ್ಸ್‌ನಲ್ಲಿ ‘ಪ್ರಿನ್ಸ್‌’ ಪ್ರತಿಮೆ

ಟಾಲಿವುಡ್‌ನ ಪ್ರಿನ್ಸ್‌ ಎಂದೇ ಖ್ಯಾತರಾಗಿರುವ ನಟ ಮಹೇಶ್‌ಬಾಬು ಅರರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಮೇಣದ ಪ್ರತಿಮೆ ಇನ್ನು ಕೆಲವೇ ದಿನಗಳಲ್ಲಿ ಮೇಡಂ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಅನಾವರಣಗೊಳ್ಳಲಿದೆ.

ಈ ವಿಷಯವನ್ನು ಮಹೇಶ್‌ಬಾಬು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆಯನ್ನು ಏರ್ಪಡಿಸಲು ವಿವರಗಳಿಗಾಗಿ ಮ್ಯೂಸಿಯಂನ ಪ್ರತಿನಿಧಿಗಳು ಸಂಪರ್ಕಿಸಿದರು. ಈ ಸಂದರ್ಭದಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮೇಡಂ ಟುಸ್ಸಾಡ್ಸ್‌ನಲ್ಲಿ, ಈ ವರೆಗೆ ಸ್ಥಾನ ಗಳಿಸಿದ ಏಕೈಕ ತೆಲುಗು ನಟ ಬಾಹುಬಲಿ ಖ್ಯಾತಿಯ ಪ್ರಭಾಸ್‌. ಈಗ ಈ ಸಾಲಿಗೆ ಮಹೇಶ್‌ಬಾಬು ಕೂಡ ಸೇರ್ಪಡೆಯಾಗಲಿದ್ದಾರೆ. ಈಚೆಗೆ ತೆರೆಕಂಡ ‘ಭರತ್ ಅನೆ ನೇನು’ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಮಹೇಶ್‌ಬಾಬುಗೆ ಈ ಗೌರವ ಮತ್ತಷ್ಟು ಖುಷಿ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.