ಟ್ವೀಟ್ ತೆಗೆದು ಹಾಕಿದ ಸುರೇಶ್ ಕುಮಾರ್; ಪ್ರಶ್ನೆಯಾಗಿಯೇ ಉಳಿದ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಬೆಳಿಗ್ಗೆ 9:30ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಟ್ವೀಟಿಸಿದ್ದ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಕೆಲ ಸಮಯದಲ್ಲಿ ಅದನ್ನು ತೆಗೆದು ಹಾಕಿದ್ದಾರೆ.
ಪ್ರಮಾಣ ವಚನ ಸ್ವೀಕಾರಕ್ಕೆ ಸಂಬಂಧಿಸಿದಂತೆ ರಾಜಭವನದಿಂದ ಅಧಿಕೃತವಾಗಿ ಪ್ರಕಟಣೆ ಬಂದಿಲ್ಲ. ಆದರೆ, ಬಿಜೆಪಿ ಮುಖಂಡ ಸುರೇಶ್ ಕುಮಾರ್ ಹಾಗೂ ಪಕ್ಷದ ಟ್ವಿಟರ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಪ್ರಮಾಣ ವಚನದ ಸಮಯವನ್ನು ಪ್ರಕಟಿಸಲಾಗಿತ್ತು.
ಮಾಧ್ಯಮಗಳಲ್ಲಿ ಈ ಪ್ರಕಟಣೆ ಬಿತ್ತರಗೊಂಡ ಕೆಲ ಸಮಯದಲ್ಲಿ ಅದನ್ನು ತೆಗೆದು ಹಾಕಲಾಗಿದೆ.
ಬಿಜೆಪಿ ತೊರೆದಿರುವ ಹಿರಿಯ ಮುಖಂಡ ಯಶವಂತ್ ಸಿನ್ಹಾ, ‘ಕರ್ನಾಟಕದಲ್ಲಿ ಪ್ರಜಾಪ್ರಭುತ್ವವನ್ನು ಪತನಗೊಳಿಸಲು ಮುಂದಾಗಿರುವ ಪಕ್ಷದಿಂದ ಸದ್ಯ ಹೊರಗಿದ್ದೇನೆ. ಮುಂದಿನ ವರ್ಷ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಬಹುಮತ ಪಡೆಯದಿದ್ದರೆ, ಇದೇ ಮಾರ್ಗವನ್ನೂ ಅಲ್ಲಿಯೂ ಅನುಸರಿಸಲಿದೆ. ದಯವಿಟ್ಟು ಈ ಎಚ್ಚರಿಕೆಯನ್ನು ಗಮನಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
–ಯಶವಂತ್ ಸಿನ್ಹಾ
I am glad I have left the party which is so brazenly trying to subvert democracy in Karnataka. It will do the same if it fails to get majority in Lok Sabha next year. Pl note my warning.
— Yashwant Sinha (@YashwantSinha) May 16, 2018
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.