ಗುರುವಾರ , ಮಾರ್ಚ್ 4, 2021
30 °C

ಇಟಾಲಿಯನ್‌ ಓಪನ್‌ ಟೆನಿಸ್‌: ಮೂರನೇ ಸುತ್ತಿಗೆ ಹಲೆಪ್‌

ಪಿಟಿಐ Updated:

ಅಕ್ಷರ ಗಾತ್ರ : | |

ಇಟಾಲಿಯನ್‌ ಓಪನ್‌ ಟೆನಿಸ್‌: ಮೂರನೇ ಸುತ್ತಿಗೆ ಹಲೆಪ್‌

ರೋಮ್‌ (ಎಎಫ್‌ಪಿ): ರುಮೇನಿಯಾದ ಸಿಮೊನಾ ಹಲೆಪ್‌ ಅವರು ಎಟಿಪಿ, ಡಬ್ಲ್ಯುಟಿಎ ಇಟಾಲಿಯನ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸಿಮೊನಾ 6–1, 6–0ರ ನೇರ ಸೆಟ್‌ಗಳಿಂದ ಜಪಾನ್‌ನ ನವೊಮಿ ಒಸಾಕ ಅವರನ್ನು ಸೋಲಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಿಮೊನಾ, ಎರಡೂ ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದು ಎದುರಾಳಿಯ ಸವಾಲು ಮೀರಿದರು. ಮೊದಲ ಸೆಟ್‌ನಲ್ಲಿ ಒಂದು ಗೇಮ್‌ ಗೆಲ್ಲಲು ಶಕ್ತರಾದ ನವೊಮಿ, ಎರಡನೇ ಸೆಟ್‌ನಲ್ಲಿ ತಾವು ಮಾಡಿದ ಮೂರೂ ಸರ್ವ್‌ಗಳನ್ನು ಕಳೆದುಕೊಂಡರು.

ಇತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಕ್ಯಾರೋಲಿನಾ ಗಾರ್ಸಿಯಾ 6–3, 6–4ರಲ್ಲಿ ಟೈಮಿ ಬಾಬೊಸ್‌ ಎದುರೂ, ಅಮೆರಿಕದ ಸ್ಲೋವಾನೆ ಸ್ಟೀಫನ್ಸ್‌ 6–0, 5–7, 6–4ರಲ್ಲಿ ಕಯಿಯಾ ಕನೆ‍ಪಿ ವಿರುದ್ಧವೂ, ರಷ್ಯಾದ ಡೇರಿಯಾ ಕಸತ್ಕಿನಾ 6–2, 6–3ರಲ್ಲಿ ಅಮೆರಿಕದ ಡೇನಿಯೆಲ್ಲೆ ಕಾಲಿನ್ಸ್‌ ಮೇಲೂ ಗೆದ್ದರು.

ಫಾಬಿಯೊಗೆ ಜಯ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಇಟಲಿಯ ಫಾಬಿಯೊ ಫಾಗ್ನಿನಿ ಮೂರನೇ ಸುತ್ತು ಪ್ರವೇಶಿಸಿದರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ಫಾಗ್ನಿನಿ 6–4, 1–6, 6–3ರಲ್ಲಿ ಡಾಮಿನಿಕ್‌ ಥೀಮ್‌ ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ಅಲ್ಬರ್ಟ್‌ ರಾಮೊಸ್‌ 6–7, 7–6, 7–6ರಲ್ಲಿ ಅಮೆರಿಕದ ಜಾನ್‌ ಇಸ್ನರ್‌ ವಿರುದ್ಧ ಗೆದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.