ಮಂಗಳವಾರ, ಮಾರ್ಚ್ 2, 2021
28 °C
ಕಸ್ತೂರಿಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

‘ಜೈವಿಕ ಕ್ಷಯ ಪ್ರಯೋಗಾಲಯ’ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಜೈವಿಕ ಕ್ಷಯ ಪ್ರಯೋಗಾಲಯ’ ಆರಂಭ

ಉಡುಪಿ: ಕಸ್ತೂರಿಬಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ನೂತನವಾಗಿ ನಿರ್ಮಿಸಿದ 3ನೇ ಹಂತದ ‘ಜೈವಿಕ ಕ್ಷಯ ಪ್ರಯೋಗಾಲಯ’ವನ್ನು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಯ ಸಹ ಕುಲಾಧಿಪತಿ ಡಾ. ಎಚ್ ಎಸ್ ಬಲ್ಲಾಳ್ ಬುಧವಾರ ಉದ್ಘಾಟಿಸಿದರು.

ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ. ಕಿರಣ್ ಚಾವ್ಲಾ ಮಾತನಾಡಿ, ಕಸ್ತೂರಿಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮೈಕ್ರೋಬಯಾಲಜಿ ವಿಭಾಗದ ಸೇವೆಗಳನ್ನು ನವೀಕರಿಸುವ ಮತ್ತು ಬಲಪಡಿಸುವ ಸಲುವಾಗಿ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ. ಮೈಕ್ರೋಬ್ಯಾಕ್ಟೀರಿಯಲ್ ಪ್ರಯೋಗಾಲಯದ ಸಿಬ್ಬಂದಿಗಳಿಗೆ ಸುರಕ್ಷಿತ ಮತ್ತು ಸೋಂಕು ಮುಕ್ತ ಪರಿಸರವನ್ನು ಒದಗಿಸಲು ರಾಷ್ಟ್ರೀಯ ಕ್ಷಯರೋಗ ಕಾರ್ಯಕ್ರಮದ ನಿಯಮಗಳ ಪ್ರಕಾರ ಈ ಪರಿಷ್ಕೃತ ಬಿಎಸ್ಎಲ್ 3ನೇ ಪ್ರಯೋಗಾಲಯದ ಸ್ಥಾಪಿಸಲಾಗಿದೆ. ಇಂತಹ ಸೌಕರ್ಯವನ್ನು ಹೊಂದಿದ ರಾಜ್ಯದ ಮೊದಲ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯವಾಗಿದೆ ಎಂದರು.

ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹ ಕುಲಪತಿ ಡಾ. ಎಚ್. ವಿನೋದ್ ಭಟ್, ಡಾ. ಪೂರ್ಣಿಮಾ ಬಾಳಿಗಾ, ಕಸ್ತೂರ್ಬಾ ವೈದ್ಯಕೀಯ ಕಾಲೆಜಿನ ಡೀನ್ ಡಾ. ಪ್ರಜ್ಞಾ ರಾವ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ ಮುತ್ತಣ್ಣ , ಜಿಲ್ಲೆಯ ಕ್ಷಯ ರೋಗ ಅಧಿಕಾರಿ ಚಿದಾನಂದ ಸಂಜು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.