ಕಾಂಗ್ರೆಸ್‌ ಶಾಸಕರ ಬಿಡಾರದ ರೆಸಾರ್ಟ್‌ಗೆ ನೀಡಿದ್ದ ಭದ್ರತೆ ವಾಪಸ್

7

ಕಾಂಗ್ರೆಸ್‌ ಶಾಸಕರ ಬಿಡಾರದ ರೆಸಾರ್ಟ್‌ಗೆ ನೀಡಿದ್ದ ಭದ್ರತೆ ವಾಪಸ್

Published:
Updated:
ಕಾಂಗ್ರೆಸ್‌ ಶಾಸಕರ ಬಿಡಾರದ ರೆಸಾರ್ಟ್‌ಗೆ ನೀಡಿದ್ದ ಭದ್ರತೆ ವಾಪಸ್

ರಾಮನಗರ: ಕಾಂಗ್ರೆಸ್ ಶಾಸಕರು ಬಿಡಾರ ಹೂಡಿರುವ ಬಿಡದಿಯ ಈಗಲ್‌ಟನ್ ರೆಸಾರ್ಟ್‌ಗೆ ನೀಡಿದ್ದ ಪೊಲೀಸ್‌ ಭದ್ರತೆಯನ್ನು ಗುರುವಾರ ಮಧ್ಯಾಹ್ನ 4.30ರ ವೇಳೆಗೆ ಹಿಂಪಡೆಯಲಾಗಿದೆ.

ಮುಖ್ಯಮಂತ್ರಿ ಕಾರ್ಯಾಲಯದ ಸೂಚನೆ‌ ಮೇರೆಗೆ ಈ ಕ್ರಮ ಕೈಗೊಂಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಒಂದು ಡಿಎಆರ್ ತುಕಡಿ‌ ಹಾಗೂ ಇಪ್ಪತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ಸದ್ಯ ರೆಸಾರ್ಟ್‌ ಗೇಟಿನ ಬಳಿ ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಾವಲಿಗೆ ನಿಂತಿದ್ದಾರೆ. ಅವರೇ ವಾಹನಗಳನ್ನು‌ ತಪಾಸಣೆ ಮಾಡಿ ಅಗತ್ಯ ಇದ್ದವರನ್ನು ಮಾತ್ರ ಒಳಗೆ ಬಿಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry