7
ಉದ್ದೀಪನ ಮದ್ದು ಬಳಕೆ ತಡೆಗೆ ಸೂಚಿಸಿದ್ದ ನಿಯಮ ಜಾರಿಗೊಳಿಸಲು ವಿಫಲ

ರುಸಾಡಾ ಮೇಲಿನ ಅಮಾನತು ಮುಂದುವರಿಕೆ

Published:
Updated:

ಮಾಂಟ್ರಿಯಲ್‌ (ಎಎಫ್‌ಪಿ): ತನ್ನ ನಿಯಮಾವಳಿಗಳನ್ನು ಜಾರಿಗೆ ತರುವಲ್ಲಿ ವಿಫಲವಾದ ರಷ್ಯಾದ ಉದ್ದೀಪನಾ ಮದ್ದು ತಡೆ ಘಟಕದ (ರುಸಾಡಾ) ಮೇಲಿನ ಅಮಾನತು ಆದೇಶವನ್ನು ವಿಶ್ವ ಉದ್ದೀಪನಾ ಮದ್ದು ತಡೆ ಘಟಕ (ವಾಡಾ) ಮುಂದುವರಿಸುವುದಾಗಿ ಹೇಳಿದೆ.

ಗುರುವಾರ ಸಭೆ ನಡೆಸಿದ ವಾಡಾದ ಆಡಳಿತ ಮಂಡಳಿಯು ಈ ನಿರ್ಧಾರ ತೆಗೆದುಕೊಂಡಿದೆ.

‘ರುಸಾಡಾವನ್ನು ಅಮಾನತುಗೊಳಿಸಿ ನೀಡಿದ್ದ ಹಿಂದಿನ ಆದೇಶವನ್ನು ಮುಂದುವರಿಸಲಾಗುವುದು.ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆಡಳಿತ ಮಂಡಳಿಯು ಈ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬಂದಿದೆ’ ಎಂದು ವಾಡಾದ ನಿರ್ದೇಶಕ ಓಲಿವಿಯರ್‌ ನಿಗ್ಲಿ ಹೇಳಿದ್ದಾರೆ.

‘ಉದ್ದೀಪನ ಮದ್ದಿನ ಬಳಕೆಯನ್ನು ತಡೆ ಹಿಡಿಯಲು ರುಸಾಡಾಗೆ ಕೆಲವು ನಿಯಮಾವಳಿಗಳನ್ನು ಜಾರಿಗೆ ತರಲು ವಾಡಾ ಸೂಚಿಸಿತ್ತು. ಇದರಲ್ಲಿ ರುಸಾಡಾ ಸಂಪೂರ್ಣ ವಿಫಲವಾಗಿದೆ. ರಷ್ಯಾದಲ್ಲಿ ಉದ್ದೀಪನ ಮದ್ದು ಬಳಕೆ ತಡೆ ಮತ್ತು ಅಥ್ಲೀಟ್‌ಗಳ ಪರೀಕ್ಷೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿರುವುದನ್ನು ರುಸಾಡಾ ಸಾಬೀತುಪಡಿಸಬೇಕು. ಆಗ ಮಾತ್ರ ಅಮಾನತು ಹಿಂಪಡೆಯಬಹುದು’ ಎಂದು ಅವರು ತಿಳಿಸಿದ್ದಾರೆ.

ರಷ್ಯಾದ ಕ್ರೀಡಾರಂಗದಲ್ಲಿ ಉದ್ದೀಪನ ಮದ್ದಿನ ಬಳಕೆಯನ್ನು ತಡೆಯುವಲ್ಲಿ ರುಸಾಡಾ ವಿಫಲವಾಗಿದೆ. ಸಂಶಯಾಸ್ಪದ ಕ್ರೀಡಾಪಟುಗಳಿಂದ ಪರೀಕ್ಷೆಗಾಗಿ ಪಡೆದಿದ್ದ ಮಾದರಿಗಳನ್ನು ನಾಶಪಡಿಸಿದ ಆರೋಪವೂ ರುಸಾಡಾ ಮೇಲೆ ಇದ್ದ ಕಾರಣ ಅದನ್ನು ವಾಡಾ 2015ರಲ್ಲಿ ಅಮಾನತುಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry