ಬಿಎಫ್‌ಸಿಗೆ ಆಲ್ಬರ್ಟ್ ರೋಕಾ ವಿದಾಯ?

7

ಬಿಎಫ್‌ಸಿಗೆ ಆಲ್ಬರ್ಟ್ ರೋಕಾ ವಿದಾಯ?

Published:
Updated:
ಬಿಎಫ್‌ಸಿಗೆ ಆಲ್ಬರ್ಟ್ ರೋಕಾ ವಿದಾಯ?

ನವದೆಹಲಿ (ಪಿಟಿಐ): ಎರಡು ಋತುಗಳಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ ಕೋಚ್ ಆಲ್ಬರ್ಟ್ ರೋಕಾ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ.

ಸ್ಪೇನ್‌ನ ರೋಕಾ 2016ರ ಜುಲೈ ತಿಂಗಳಲ್ಲಿ ತಂಡದ ಜೊತೆ ಎರಡು ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದು ಇದೇ ತಿಂಗಳಲ್ಲಿ ಕೊನೆಗೊಳ್ಳಲಿದೆ. ಒಪ್ಪಂದವನ್ನು ನವೀಕರಿಸದೇ ಇರಲು ಅವರು ನಿರ್ಧರಿಸಿದ್ದಾರೆ ಎಂದು ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥ್‌ ಜಿಂದಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಿಎಫ್‌ಸಿ ಮತ್ತು ಭಾರತ ಫುಟ್‌ಬಾಲ್‌ ರೋಕಾ ಅವರಿಗೆ ಅಭಾರಿಯಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ಕೂಡ ರೋಕಾ ತಂಡದ ಜೊತೆಗಿದ್ದರು. ತಮ್ಮ ಸಿದ್ಧಾಂತಗಳಿಗೆ ಬದ್ಧರಾಗಿ ತಂಡವನ್ನು ಮುನ್ನಡೆಸಿದ್ದಾರೆ. ಇದು ಮಹತ್ವದ ಅಂಶ’ ಎಂದು ಅವರು ಹೇಳಿದ್ದಾರೆ.

ಬುಧವಾರ ಢಾಕಾದಲ್ಲಿ ನಡೆದ ಎಎಫ್‌ಸಿ ಕಪ್‌ ಗುಂಪು ಹಂತದ ‍ಕೊನೆಯ ಪಂದ್ಯದಲ್ಲಿ ಡಾಕಾ ಅಬಹಾನಿ ಲಿಮಿಟೆಡ್ ತಂಡವನ್ನು ಬಿಎಫ್‌ಸಿ 4–0ಯಿಂದ ಮಣಿಸಿತ್ತು. ಈ ಮೂಲಕ ಅಂತರ ವಲಯ ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸಿತ್ತು.

ರೋಕಾ ಅವರಿಂದ ತರಬೇತು ಪಡೆದಿದ್ದ ಬಿಎಪ್‌ಸಿ ತಂಡ 2016ರಲ್ಲಿ ಎಎಫ್‌ಸಿ ಕಪ್ ಟೂರ್ನಿಯ ಫೈನಲ್‌ಗೆ ಪ್ರವೇಶಿಸಿತ್ತು. ಈ ಸಾಧನೆ ಮಾಡಿದ ಭಾರತದ ಮೊದಲ ಕ್ಲಬ್ ಎಂಬ ಹಿರಿಮೆಗೆ ಪಾತ್ರವಾಗಿತ್ತು. 2017ರಲ್ಲಿ ಫೆಡರೇಷನ್ ಕಪ್‌ ಮತ್ತು ಈ ಬಾರಿ ಸೂಪರ್ ಕಪ್ ಗೆದ್ದ ಸಾಧನೆಯನ್ನೂ ತಂಡ ಮಾಡಿತ್ತು. ಇಂಡಿಯನ್ ಸೂಪರ್‌ ಲೀಗ್‌ನಲ್ಲಿ ರನ್ನರ್ ಅಪ್ ಆಗಿತ್ತು.

‘ಅಲ್ಪ ಕಾಲ ಕ್ಲಬ್‌ ಜೊತೆ ಇದ್ದರೂ ಇಲ್ಲಿ ಕಳೆದ ದಿನಗಳ ನೆನಪು ಎಂದೂ ಮಾಸದು. ಕ್ರೀಡಾ ಜೀವನದಲ್ಲಿ ಅತ್ಯಂತ ಕಠಿಣ ನಿರ್ಧಾರವನ್ನು ಅನಿವಾರ್ಯವಾಗಿ ಕೈಗೊಳ್ಳಬೇಕಾಗಿ ಬಂದಿದೆ’ ಎಂದು ರೋಕಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry