ಮಾಯಾವತಿ ಹೇಳಿಕೆಗೆ ಮಮತಾ ಬೆಂಬಲ

7
ಸಂವಿಧಾನ ನಾಶಕ್ಕೆ ಬಿಜೆಪಿ ಷಡ್ಯಂತ್ರ

ಮಾಯಾವತಿ ಹೇಳಿಕೆಗೆ ಮಮತಾ ಬೆಂಬಲ

Published:
Updated:

ಕೋಲ್ಕತ್ತ : ‘ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಹಿಂದೆ ಸಂವಿಧಾನವನ್ನು ನಾಶಪಡಿಸುವ ಷಡ್ಯಂತ್ರ ಅಡಗಿದೆ’ ಎಂಬ ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿಕೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲಿಸಿದ್ದಾರೆ.

‘ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನು ನಾವೆಲ್ಲರೂ ಗೌರವಿಸಬೇಕು. ಸಂವಿಧಾನದ ವಿಚಾರದಲ್ಲಿ ಮಾಯಾವತಿ ವ್ಯಕ್ತಪಡಿಸಿರುವ ಆತಂಕವನ್ನು ನಾನು ಬೆಂಬಲಿಸುತ್ತೇನೆ’ ಎಂದು ಮಮತಾಬ್ಯಾನರ್ಜಿ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಇದಕ್ಕೂ ಮುನ್ನ ನವದೆಹಲಿಯಲ್ಲಿ ಮಾತನಾಡಿದ್ದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದ ನಾಶಕ್ಕೆ ಷಡ್ಯಂತ್ರ ನಡೆಯುತ್ತಿದೆ. ಆ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಕೊಡಲಿಪೆಟ್ಟು ನೀಡುತ್ತಿದ್ದು, ಇದಕ್ಕೆ ಕರ್ನಾಟಕದ ಹಾಲಿ ರಾಜಕೀಯವೇ ಸೂಕ್ತ ಉದಹರಣೆಯಾಗಿದೆ’ ಎಂದು ಕಿಡಿಕಾರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry