ಬೆಂಗಳೂರು: ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ ಅವರಿಗೆ ಯಡಿಯೂರಪ್ಪ ಅವರೇ ಕರೆ ಮಾಡಿ ತಮ್ಮನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್ ಶನಿವಾರ ಮಧ್ಯಾಹ್ನ 1.15ಕ್ಕೆ ಖಾಸಗಿ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿದೆ.

ಯಡಿಯೂರಪ್ಪ ಅವರನ್ನು ಬಿ.ಸಿ.ಪಾಟೀಲ ಅವರದ್ದು ಎನ್ನಲಾದ ದನಿಯು ‘ಅಣ್ಣಾ’ ಎಂದೇ ಸಂಬೋಧಿಸಿದೆ. ‘ನಮ್ಮನ್ನು ಬೆಂಬಲಿಸು’ ಎನ್ನುವ ಯಡಿಯೂರಪ್ಪ ಅವರದ್ದು ಎನ್ನಲಾದ ದನಿಯ ವಿನಂತಿಗೆ, ‘ನಾನು ಕೊಚ್ಚಿನ್ಗೆ ಹೋಗ್ತಿದ್ದೀನಿ. ನನ್ನ ಮಾತು ಕೇಳಲು ಸಿದ್ಧರಿರುವ ಇನ್ನೂ ಮೂರ್ನಾಲ್ಕು ಜನರು ಇದ್ದಾರೆ’ ಎಂಬ ಉತ್ತರ ಬಂದಿದೆ.

‘ನನ್ನ ಬಗ್ಗೆ ಗೊತ್ತು ತಾನೆ? ಎಲ್ಲರನ್ನೂ ಕರೆದುಕೊಂಡು ಬಂದುಬಿಡು. ನಿನಗೇನು ಬೇಕು ಶ್ರೀರಾಮುಲುಗೆ ಫೋನ್ ಮಾಡಿ ಹೇಳು’ ಎಂದು ಯಡಿಯೂರಪ್ಪ ಅವರದ್ದು ಎನ್ನಲಾದ ದನಿ ಪ್ರತಿಕ್ರಿಯಿಸಿದೆ.

‘ಒಂದು ಮಾತು ಮೊನ್ನೆಯೇ ಹೇಳಿದ್ದರೆ ಚೆನ್ನಾಗಿರೋದು. ಈಗ ಕೊಚಿನ್ಗೆ ಹೋಗ್ತಾ ಇದ್ದೇವೆ’ ಎಂದು ಬಿ.ಸಿ.ಪಾಟೀಲ ಅವರದ್ದು ಎನ್ನಲಾದ ದನಿ ಪ್ರತಿಕ್ರಿಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.