ಗುಬ್ಬಿ ಮರಿ

7

ಗುಬ್ಬಿ ಮರಿ

Published:
Updated:
ಗುಬ್ಬಿ ಮರಿ

ಪುಟ್ಟು: ಗುಬ್ಬಿ ಮರಿ ಗುಬ್ಬಿ ಮರಿ

ಯಾಕೆ ಕೋಪವೇ!?

ಗೂಡು ಇಲ್ಲ ಮರಿಯೂ ಇಲ್ಲ

ಅಮ್ಮ ಬೈದಳೇ!?

ಗುಬ್ಬಿ: ಇಲ್ಲ ಕಂದ ಮುದ್ದು ಕಂದ

ನಿನ್ನ ಅಮ್ಮ ಎಷ್ಟು ಚಂದ

ಕಾಳು ಕೊಟ್ಟು ನೀರು ಇಟ್ಟು

ಸಾಕುತ್ತಾರೆ ಪ್ರೀತಿ ಕೊಟ್ಟು!

ಪುಟ್ಟು: ಪ್ರೀತಿಯುಂಟು ಕಾಳು ಉಂಟು

ನನ್ನ ಜೋಡಿ ಆಟವುಂಟು

ಅಪ್ಪ ಅಮ್ಮ ತಂಗಿಯುಂಟು

ಏಕೆ ಬಿಡುವೆ ನಮ್ಮ ನಂಟು?

ಗುಬ್ಬಿ: ಗಾಳಿಯಲಿ ಏನೋ ಬಂದು

ಮೈಯಿಗೆಲ್ಲ ಚುಚ್ಚಿ ನಿಂದು

ಹಲವು ಶಬ್ದ ಅರಚಿ ಕರೆದು

ಕಾಡಿದರೆ ನಮ್ಮ ಜೀವ ನಿಲ್ಲದು!

ಪುಟ್ಟು: ನನ್ನ ಮರಿ ಮುದ್ದು ಮರಿ

ದೊಡ್ಡವರ ದಡ್ಡತನಕೆ

ನಾನು ಕ್ಷಮೆಯ ಕೋರುವೆ

ನನಗೂ ಅಷ್ಟೇ ಆಟವಿಲ್ಲ

ಓದು ಬರೆ ಮಾತೆಯೆಲ್ಲ

ನಿತ್ಯ ನನಗೂ ಕಾಟವೇ

ನಾನು ನೀನು ಸೇರಿ ಈಗ

ದೂರದ ಊರ ಸೇರಿ ಬೇಗ

ಅಜ್ಜಿಯೊಡಲ ಸೇರುವ

ಮರದ ಹಸಿರು ಅಜ್ಜಿ ಉಸಿರು

ತಿಂಡಿ ತೀರ್ಥ ಕತೆಯೂ ಚಂದ

ಬಾರೋ ಮರಿ ಹೋಗುವ

ಗುಬ್ಬಿ: ನಿನ್ನ ಪ್ರೀತಿ ನಿನ್ನ ನೀತಿ

ನನಗೆ ಖುಷಿಯ ತಂದಿದೆ

ನಾನು ಬರುವೆ ನಿನ್ನ ಜೊತೆಗೆ

ನಿನ್ನ ಅಜ್ಜಿ ಊರಿಗೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry