ಎಸ್‌ಸಿಎಸ್‌: ಯುದ್ಧ ವಿಮಾನ ಇಳಿಸಿದ ಚೀನಾ

7

ಎಸ್‌ಸಿಎಸ್‌: ಯುದ್ಧ ವಿಮಾನ ಇಳಿಸಿದ ಚೀನಾ

Published:
Updated:

ಬೀಜಿಂಗ್‌: ವಿವಾದಾತ್ಮಕ ದಕ್ಷಿಣ ಚೀನಾ ಸಮುದ್ರ(ಎಸ್‌ಸಿಎಸ್‌) ವ್ಯಾಪ್ತಿಯಲ್ಲಿನ ಭೂಭಾಗಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಚೀನಾ, ಇದೇ ಮೊದಲ ಬಾರಿಗೆ ಯುದ್ಧ ವಿಮಾನಗಳನ್ನು ಇಳಿಸಿದೆ.

ಎಸ್‌ಸಿಎಸ್‌ನ ದ್ವೀಪದ ಬಂಡೆಗಳ ಮೇಲೆ ಫೈಟರ್ ಜೆಟ್ ಮತ್ತು ಎಚ್‌–6ಕೆ ಬಾಂಬರ್‌ಗಳನ್ನು ಇಳಿಸುವ ಮತ್ತು ಹಾರಾಟದ ಪರೀಕ್ಷೆ ನಡೆಸಲಾಗಿದೆ ಚೀನಾ ಅಧಿಕಾರಿಗಳು ತಿಳಿಸಿದ್ದಾರೆ.

‘ಈ ತರಬೇತಿಯು ವಾಯುಪಡೆಯ ಸಾಮರ್ಥ್ಯ ಹೆಚ್ಚಿಸಿದೆ. ಸಮುದ್ರದಲ್ಲಿನ ಎಲ್ಲಾ ರೀತಿಯ ಭದ್ರತಾ ಬೆದರಿಕೆಗಳ ವಿರುದ್ಧ ನೈಜ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಅನುಕೂಲಕರವಾಗಿದೆ’ ಎಂದು ಚೀನಾದ ಸೈನಾ ತಜ್ಞ ವಾಂಗ್ ಮಿನ್ಲಿಯಾಂಗ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry