ಅಂಜಲಿ ಮೆನನ್‌ ಮುಂದಿನ ಚಿತ್ರ ಜುಲೈ 6ಕ್ಕೆ ಬಿಡುಗಡೆ

7

ಅಂಜಲಿ ಮೆನನ್‌ ಮುಂದಿನ ಚಿತ್ರ ಜುಲೈ 6ಕ್ಕೆ ಬಿಡುಗಡೆ

Published:
Updated:
ಅಂಜಲಿ ಮೆನನ್‌ ಮುಂದಿನ ಚಿತ್ರ ಜುಲೈ 6ಕ್ಕೆ ಬಿಡುಗಡೆ

‘ಬೆಂಗಳೂರು ಡೇಸ್‌’ ಮಾಲಿವುಡ್‌ನ ಜನಪ್ರಿಯ ಚಿತ್ರ. ಈಗ ಈ ಚಿತ್ರ ಬೇರೆ ಭಾಷೆಗಳಿಗೆ ರಿಮೇಕ್‌ ಆಗುತ್ತಿದೆ. ಈ ಚಿತ್ರದ ನಿರ್ದೇಶಕಿ ಅಂಜಲಿ ಮೆನನ್‌ ನಿರ್ದೇಶನದ ಮತ್ತೊಂದು ಬಹುನಿರೀಕ್ಷಿತ ಚಿತ್ರ ಜುಲೈ 6ರಂದು ಬಿಡುಗಡೆಯಾಗಲಿದೆ.

ಅಂಜಲಿ ನಿರ್ದೇಶನದ ಮುಂದಿನ ಚಿತ್ರದ ಬಗ್ಗೆ ಪ್ರೇಕ್ಷಕರು ಭಾರಿ ನಿರೀಕ್ಷೆ ವ್ಯಕ್ತಪಡಿಸಿ, ‘ಮುಂದಿನ ಚಿತ್ರ ಯಾವಾಗ’ ಎಂಬ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. ಇದಕ್ಕೆ ಅಂಜಲಿ ಟ್ವಿಟ್ಟರ್‌ನಲ್ಲಿ ಉತ್ತರಿಸಿದ್ದು, ‘ಜುಲೈ 6’ ಎಂದಿದ್ದಾರೆ. ಆದರೆ ಈ ಚಿತ್ರಕ್ಕೆ ಇನ್ನೂ ಹೆಸರಿಡಬೇಕಾಗಿದೆ.

ಈ ಚಿತ್ರದ ಮುಖ್ಯಪಾತ್ರಗಳಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್‌, ನಟಿಯರಾದ ಪಾರ್ವತಿ ಹಾಗೂ ನಜ್ರೀಯಾ ನಜೀಂ ಇದ್ದಾರೆ. ‘ಬೆಂಗಳೂರು ಡೇಸ್‌’ ಚಿತ್ರ ಬ್ಲಾಕ್‌ಬಸ್ಟರ್‌ ಹಿಟ್‌ ಗಳಿಸಿತ್ತು. ಈ ಚಿತ್ರದಲ್ಲಿ ನಟಿಯರಾದ ಪಾರ್ವತಿ ಹಾಗೂ ನಜ್ರೀಯಾ ನಟಿಸಿದ್ದರು. ಅಂಜಲಿ ಮೆನನ್‌ ಜೊತೆ ಆತ್ಮೀಯ ಸಂಬಂಧ ಹೊಂದಿರುವ ಮೂವರ ನಂಟು ಈ ಸಿನಿಮಾದಲ್ಲೂ ಮುಂದುವರಿದಿದೆ. ಈ ಚಿತ್ರದಲ್ಲಿ ನಿರ್ದೇಶಕ ರಂಜಿತ್‌ ಅವರು ನಾಯಕನ ಅಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರೋಶನ್‌ ಮ್ಯಾಥ್ಯೂ, ಸಿದ್ಧಾರ್ಥ್‌ ಮೆನನ್‌, ಅತುಲ್‌ ಕುಲಕರ್ಣಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಎಂ. ಜಯಚಂದ್ರನ್‌ ಹಾಗೂ ರಘು ದೀಕ್ಷಿತ್‌ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry