ಮಹಿಳೆ ಹೊಟ್ಟೆಯಲ್ಲಿ 106 ಕೊಕೇನ್ ಮಾತ್ರೆ!

7

ಮಹಿಳೆ ಹೊಟ್ಟೆಯಲ್ಲಿ 106 ಕೊಕೇನ್ ಮಾತ್ರೆ!

Published:
Updated:

ನವದೆಹಲಿ: ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾದ ಬ್ರೆಜಿಲ್‌ನ 25 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಕೊಕೇನ್‌ ತುಂಬಿಸಿದ್ದ 106 ಮಾತ್ರೆ ಪತ್ತೆಯಾಗಿವೆ.

ಬ್ರೆಜಿಲ್‌ನಿಂದ ಮೇ 14ರಂದು ಇಲ್ಲಿಗೆ ಬಂದಿಳಿದ ಮಹಿಳೆಯನ್ನು ಗುಪ್ತಚರ ಮಾಹಿತಿ ಆಧರಿಸಿ ವಶಕ್ಕೆ ಪಡೆಯಲಾಗಿತ್ತು.

ಕ್ಷ–ಕಿರಣ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ಹೊಟ್ಟೆಯಲ್ಲಿ ಒಟ್ಟು 930 ಗ್ರಾಂ ಕೊಕೇನ್ ತುಂಬಿಸಿದ್ದ ಮಾತ್ರೆ ಕಂಡುಬಂದವು ಎಂದು ಮಾದಕವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಈ ಮಾದಕ ವಸ್ತುವಿನ ಮೌಲ್ಯ ₹6 ಕೋಟಿಗಳಿರಬಹುದು ಎಂದು ಅಂದಾಜಿಸಲಾಗಿದೆ. ದಕ್ಷಿಣ ಅಮೆರಿಕದ ಈ ಮಾದಕ ವಸ್ತುವನ್ನು ದೆಹಲಿಯಲ್ಲಿರುವ ನೈಜೀರಿಯಾದ ಮಾದಕವಸ್ತು ಜಾಲಕ್ಕೆ ಸಾಗಿಸುವ ಯತ್ನದಲ್ಲಿ ಮಹಿಳೆ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾಳೆ.

ದಕ್ಷಿಣ ಅಮೆರಿಕದ ಮಾದಕ ವಸ್ತು ಮಾರಾಟ ಜಾಲ ಈ ಮಹಿಳೆಯನ್ನು ಮಧ್ಯವರ್ತಿಯನ್ನಾಗಿ ಬಳಸಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾದಕವಸ್ತು ಹಾಗೂ ಮಾನಸಿಕ ವ್ಯಸನ ಪದಾರ್ಥಗಳು (ಎನ್‌ಡಿಪಿಎಸ್) ಕಾಯ್ದೆ ಅಡಿ ಶನಿವಾರ ಆಕೆಯನ್ನು ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry