ಮಳೆಗೆ ಗೋಡೆ ಕುಸಿದು 15 ಜನರಿಗೆ ಗಾಯ

7

ಮಳೆಗೆ ಗೋಡೆ ಕುಸಿದು 15 ಜನರಿಗೆ ಗಾಯ

Published:
Updated:
ಮಳೆಗೆ ಗೋಡೆ ಕುಸಿದು 15 ಜನರಿಗೆ ಗಾಯ

ಸೇಡಂ (ಕಲಬುರ್ಗಿ): ಪಟ್ಟಣದಲ್ಲಿ ಸೋಮವಾರ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು 15 ಜನರು ಗಾಯಗೊಂಡಿದ್ದಾರೆ.

ಸಂಜೆ 4ರಿಂದ 5ಗಂಟೆಯವರೆಗೆ ರಭಸದಿಂದ ಮಳೆ ಸುರಿಯಿತು. ಸಾರ್ವಜನಿಕರು ಆಶ್ರಯ ಪಡೆಯಲೆಂದು ಕಟ್ಟಡವೊಂದರ ಮುಂಭಾಗದಲ್ಲಿ ಅಳವಡಿಸಿದ್ದ ಟಿನ್‌ ಶೀಟ್‌ಗಳ ಕೆಳಗೆ ನಿಂತಿದ್ದರು. ಈ ವೇಳೆ  ಗೋಡೆ ಕುಸಿದು ಶೀಟ್‌ಗಳ ಮೇಲೆ ಬಿದ್ದಿದೆ. ಇದರಿಂದ ಇಬ್ಬರಿಗೆ ಗಂಭೀರ ಹಾಗೂ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಂಪೆರೆದ ಮಳೆ: ತಾಲ್ಲೂಕಿನ ಕುರಕುಂಟಾ, ಮದಕಲ್, ಹೈಯ್ಯಾಳ, ಸಟಪಟನಳ್ಳಿ, ಸೂರವಾರದಲ್ಲಿ ಬಿರುಗಾಳಿ ಜೊತೆ ಮಳೆ ಆರ್ಭಟಿಸಿತು.

ಮೈಸೂರು ವರದಿ: ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry