ವಿಷ ಸೇವಿಸಿ ದಂಪತಿ ಆತ್ಮಹತ್ಯೆ

7

ವಿಷ ಸೇವಿಸಿ ದಂಪತಿ ಆತ್ಮಹತ್ಯೆ

Published:
Updated:

ಚಿತ್ರದುರ್ಗ: ತಾಲ್ಲೂಕಿನ ಮಾಡನಾಯಕನಹಳ್ಳಿಯಲ್ಲಿ ವಿಷ ಸೇವಿಸಿ ರೈತ ದಂಪತಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಡ್ಡಪ್ಪ (40) ಹಾಗೂ ಭಾರತಿ (35) ಮೃತ ದಂಪತಿ.

ಗುಡ್ಡಪ್ಪ ಅವರಿಗೆ ಒಂದೂವರೆ ಎಕರೆ ಜಮೀನು ಇತ್ತು. ಪ್ರತಿ ವರ್ಷ ಈರುಳ್ಳಿ ಬೆಳೆಯುತ್ತಿದ್ದರು. ಬೆಳೆಗೆ ಉತ್ತಮ ಬೆಲೆ ಸಿಗದೇ ಇರುವುದರಿಂದ ಅವರು ಬೇಸರಗೊಂಡಿದ್ದರು. ಗ್ರಾಮದ ಸಮೀಪದಲ್ಲಿದ್ದ ಜಮೀನಿಗೆ ತೆರಳಿ ದಂಪತಿ ವಿಷ ಸೇವಿಸಿದ್ದಾರೆ. ಮರಣಪತ್ರ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry