ಕಾಂಗ್ರೆಸ್‌ನಿಂದ ವಿಶ್ವಾಸಘಾತುಕ ದಿನಾಚರಣೆ 26ಕ್ಕೆ

7
ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ

ಕಾಂಗ್ರೆಸ್‌ನಿಂದ ವಿಶ್ವಾಸಘಾತುಕ ದಿನಾಚರಣೆ 26ಕ್ಕೆ

Published:
Updated:
ಕಾಂಗ್ರೆಸ್‌ನಿಂದ ವಿಶ್ವಾಸಘಾತುಕ ದಿನಾಚರಣೆ 26ಕ್ಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಾಲ್ಕು ವರ್ಷ ಪೂರೈಸಲಿರುವ ಇದೇ 26ರಂದು ‘ವಿಶ್ವಾಸಘಾತುಕ ದಿನ’ ಎಂದು ಆಚರಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಸರ್ಕಾರವನ್ನು ನಂಬಿದ್ದ ಜನರ ಬೆನ್ನಿಗೆ ಚೂರಿ ಹಾಕಿದೆ. ಇದನ್ನು ಖಂಡಿಸಿ ‘ವಿಶ್ವಾಸಘಾತುಕ ದಿನ’ ಆಚರಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಶೋಕ್‌ ಗೆಹ್ಲೋಟ್‌ ತಿಳಿಸಿದ್ದಾರೆ. ಮೋದಿ ನೇತೃತ್ವದ ಕೋಮುವಾದಿ ಮತ್ತು ಭ್ರಷ್ಟ ಸರ್ಕಾರದಿಂದ ಹಾಳಾಗುತ್ತಿರುವ ದೇಶವನ್ನು ಕಾಪಾಡಲು ಸಮಾನಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry