ಎಂಜಿನಿಯರಿಂಗ್‌ ಮಾದರಿಗಳ ಪ್ರದರ್ಶನ

7

ಎಂಜಿನಿಯರಿಂಗ್‌ ಮಾದರಿಗಳ ಪ್ರದರ್ಶನ

Published:
Updated:

ಬೆಂಗಳೂರು: ಯಲಹಂಕದ ಬಿಎಂಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮುಕ್ತ ದಿನ ಹಮ್ಮಿಕೊಳ್ಳಲಾಗಿತ್ತು.

ವಿವಿಧ ವಿಭಾಗಗಳ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು.ಕೃಷಿ, ಆರೋಗ್ಯ, ವೈದ್ಯಕೀಯ, ಐಒಟಿ, 3ಡಿ ಪ್ರಿಂಟಿಂಗ್ (ಪರಿಸರ ಸ್ನೇಹಿ), ನಿಸ್ತಂತು ತಂತ್ರಜ್ಞಾನ, ರೋಬೋಟಿಕ್ಸ್, ರೈಲು ಹಳಿಗಳು ಬಿರುಕುಬಿಟ್ಟಾಗ ಎಚ್ಚರಿಸುವ ಸಾಧನ ಸೇರಿ 500ಕ್ಕೂ ಹೆಚ್ಚು ಮಾದರಿಗಳ ಪ್ರಾತ್ಯಕ್ಷಿಕೆ ಇಲ್ಲಿತ್ತು.

ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಂಶುಪಾಲ ಡಾ.ಜಿ.ಎನ್.ಮೋಹನ್‌ ಬಾಬು, ‘ಈ ರೀತಿಯ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗೆ ನೆರವಾಗಲಿದೆ. ಅಲ್ಲದೆ, ಆತ್ಮವಿಶ್ವಾಸವೂ ಹೆಚ್ಚಲಿದೆ. ಸಾಧನೆಗೆ ಪೂರಕವಾದ ಮನಸ್ಥಿತಿಯನ್ನು ಇದು ಬೆಳೆಸುತ್ತದೆ’ ಎಂದು ಕಿವಿಮಾತು ಹೇಳಿದರು.

ವಿವಿಧ ಕಂಪನಿಗಳ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ತೀರ್ಪುಗಾರರನ್ನಾಗಿ ಆಹ್ವಾನಿಸಲಾಗಿದೆ. ಇಲ್ಲಿ ಆಯ್ಕೆಯಾದ ಮಾದರಿಗಳನ್ನು ಅಭಿವೃದ್ಧಿ ಪಡಿಸಲು ಕಾಲೇಜು ಹಾಗೂ ವಿಟಿಯು ವತಿಯಿಂದ ಸಹಾಯಧನ ನೀಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry