ಐಒಸಿ ಲಾಭ ಶೇ 40 ಏರಿಕೆ

5

ಐಒಸಿ ಲಾಭ ಶೇ 40 ಏರಿಕೆ

Published:
Updated:
ಐಒಸಿ ಲಾಭ ಶೇ 40 ಏರಿಕೆ

ನವದೆಹಲಿ: ಭಾರತೀಯ ತೈಲ ನಿಗಮವು (ಐಒಸಿ) 2017–18ರ ನಾಲ್ಕನೇ ತ್ರೈಮಾಸಿಕದಲ್ಲಿ ₹ 5,218 ಕೋಟಿ ನಿವ್ವಳ ಲಾಭ ಗಳಿಸಿದೆ.

2016–17ರ ನಾಲ್ಕನೇ ತ್ರೈಮಾಸಿಕದಲ್ಲಿ ₹ 3,721 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭದ ಪ‍್ರಮಾಣ ಶೇ 40 ರಷ್ಟು ಹೆಚ್ಚಾಗಿದೆ.

ಒಟ್ಟಾರೆ ವಹಿವಾಟು ₹ 1.24 ಲಕ್ಷ ಕೋಟಿಯಿಂದ ₹ 1.36 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಲಾಭಾಂಶ: 2017–18ನೇ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹ 2 ರಂತೆ ಅಂತಿಮ ಲಾಭಾಂಶ ನೀಡಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ. ಮಧ್ಯಂತರ ಲಾಭಾಂಶ ರೂಪದಲ್ಲಿ ಪ್ರತಿ ಷೇರಿಗೆ ₹ 19 ರಂತೆ ಈಗಾಗಲೇ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry