ಸಾವಿನ ಪ್ರಮಾಣ ಶೇ 84

7

ಸಾವಿನ ಪ್ರಮಾಣ ಶೇ 84

Published:
Updated:

ನವದೆಹಲಿ: ಕೇರಳದಲ್ಲಿ ಕಾಣಿಸಿಕೊಂಡ ನಿಫಾ ಸೋಂಕಿತರ ಸಾವಿನ ಪ್ರಮಾಣ ಶೇ 84ರಷ್ಟಿದೆ. ಇದರಿಂದ ಕಳವಳಗೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯವು ಸೋಂಕು ಶಂಕಿತರನ್ನು ಕರೆದೊಯ್ಯಲು ಪ್ರತ್ಯೇಕ ಆಂಬುಲೆನ್ಸ್‌ ವ್ಯವಸ್ಥೆ ಮಾಡಲು ಸೂಚಿಸಿದೆ.

ಕೇರಳದಲ್ಲಿ 13 ಮಂದಿಗೆ ಈ ಸೋಂಕು ತಗುಲಿದ್ದು ದೃಢಪಟ್ಟಿದೆ. ಅವರಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಎಂಟು ಮಂದಿ ಕೋಯಿಕ್ಕೋಡ್‌ ಜಿಲ್ಲೆಯವರಾ

ದರೆ ಉಳಿದವರು ಮಲಪ್ಪುರ ಜಿಲ್ಲೆಗೆ ಸೇರಿದವರು. ಈ ಎರಡೂ ಜಿಲ್ಲೆಗಳಲ್ಲಿ ಇತರ 16 ಮಂದಿಗೆ ಸೋಂಕು ತಗಲಿರುವ ಶಂಕೆ ಇದೆ.

ಕೇಂದ್ರದ ತಂಡವು ಈ ಜಿಲ್ಲೆಗಳ ತುರ್ತು ಆರೋಗ್ಯ ವ್ಯವಸ್ಥೆಯ ಪರಿಶೀಲನೆ ನಡೆಸಿದೆ. ಸೋಂಕಿನ ಪ್ರಕರಣ ಕಣ್ತಪ್ಪಿ ಹೋಗಬಾರದು. ಸೋಂಕು ಇತರರಿಗೆ ಹರಡದಂತೆ ನೋಡಿ ಕೊಳ್ಳಬೇಕು ಎಂದು ಕೇಂದ್ರ ತಂಡ ಸೂಚಿಸಿದೆ.

2001ರಿಂದ 2007ರ ಅವಧಿಯಲ್ಲಿ ದೇಶದಲ್ಲಿ ಈ ಸೋಂಕು ಕಾಣಿಸಿಕೊಂಡ ಸಂದರ್ಭಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ.

2001ರಲ್ಲಿ ಸಿಲಿಗುರಿಯಲ್ಲಿ ನಿಫಾ ಸೋಂಕಿನಿಂದಾಗಿ ಮೃತಪಟ್ಟವರ ಪ್ರಮಾಣ ಶೇ 68ರಷ್ಟಿತ್ತು. 2007ರಲ್ಲಿ ನದಿಯಾದಲ್ಲಿ ಸೋಂಕಿಗೆ ಒಳಗಾದ ಎಲ್ಲರೂ ಮೃತಪಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry