‘ನಮ್ಮ ಬೌಲರ್‌ಗಳು ಮೆಚ್ಚುಗೆಗೆ ಅರ್ಹರು’

7

‘ನಮ್ಮ ಬೌಲರ್‌ಗಳು ಮೆಚ್ಚುಗೆಗೆ ಅರ್ಹರು’

Published:
Updated:
‘ನಮ್ಮ ಬೌಲರ್‌ಗಳು ಮೆಚ್ಚುಗೆಗೆ ಅರ್ಹರು’

ಮುಂಬೈ: ‘ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಉತ್ತಮ ಸಾಮರ್ಥ್ಯ ತೋರಿದ ನಮ್ಮ ತಂಡದ ಬೌಲರ್‌ಗಳು ಮೆಚ್ಚುಗೆಗೆ ಆರ್ಹರು’ ಎಂದು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಹೇಳಿದರು.

ಮಂಗಳವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಮೊದಲ ಪ್ಲೇ ಆಫ್‌ ಪಂದ್ಯದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡವು ಎರಡು ವಿಕೆಟ್‌ಗಳಿಂದ ಗೆದ್ದಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ರೈಸರ್ಸ್‌ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿತ್ತು.

ಗುರಿ ಬೆನ್ನತ್ತಿದ್ದ ಸಿಎಸ್‌ಕೆ 19.1 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಜಯಿಸಿತ್ತು.

‘ಕಾರ್ಲೋಸ್‌ ಬ್ರಾಥ್‌ವೇಟ್‌ ಅವರು ಮಾಡಿದ 18ನೇ ಓವರ್‌ನಲ್ಲಿ 20 ರನ್‌ಗಳನ್ನು ಕೊಟ್ಟರು. ಸಿಎಸ್‌ಕೆ ಹೆಚ್ಚು ರನ್‌ ಗಳಿಸುವ ಒತ್ತಡದಲ್ಲಿದ್ದಾಗ ಈ ಓವರ್‌ ನಮಗೆ ದುಬಾರಿಯಾಗಿದ್ದು ನಿಜ. ಆದರೆ, ಸೋಲಿಗೆ ಅವರೊಬ್ಬರೇ ಕಾರಣ ಎಂದು ಹೇಳುವುದು ಸರಿಯಲ್ಲ’ ಎಂದು ಕೇನ್‌ ಅಭಿಪ್ರಾಯಪಟ್ಟರು.

‘ನಮ್ಮ ಬೌಲರ್‌ಗಳು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದರು. ಕಡಿಮೆ ಮೊತ್ತದ ಗುರಿ ಇದ್ದ ಕಾರಣ ಕೊನೆಯ ಓವರ್‌ಗಳೂ ನಿರ್ಣಾಯಕವಾಗಿರುತ್ತವೆ.

ಇಷ್ಟೆಲ್ಲ ಇದ್ದರೂ, ಎದುರಾಳಿ ತಂಡವು ಪ್ರಯಾಸದ ಗೆಲುವು ಪಡೆಯುವಂತೆ ಮಾಡುವಲ್ಲಿ ನಮ್ಮ ಬೌಲರ್‌ಗಳು ಯಶಸ್ವಿಯಾಗಿದ್ದಾರೆ’ ಎಂದು ಅವರು ತಿಳಿಸಿದರು.

‘ಹೆಚ್ಚುವರಿಯಾಗಿ 15–20 ರನ್‌ ಗಳನ್ನು ಗಳಿಸಿದ್ದರೆ ಇನ್ನಷ್ಟು ಸವಾಲೊಡ್ಡಬಹುದಿತ್ತು. ಆದರೆ, ಅಂತಹ ಒತ್ತಡದಲ್ಲಿಯೂ ಫಾಫ್‌ ಡು ಪ್ಲೆಸಿ ಅವರು ಆಡಿದ ರೀತಿ ನಿಜಕ್ಕೂ ಅನುಕರಣೀಯ. ಅವರದ್ದು ಅಮೋಘ ಇನಿಂಗ್ಸ್‌’ ಎಂದೂ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry