7

25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಜೆಟ್‌ ಏರ್‌ವೇಸ್, 2 ಉಚಿತ ಟಿಕೆಟ್: ವೈರಲ್

Published:
Updated:
25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಜೆಟ್‌ ಏರ್‌ವೇಸ್, 2 ಉಚಿತ ಟಿಕೆಟ್: ವೈರಲ್

ನವದೆಹಲಿ: ಜೆಟ್‌ ಏರ್‌ವೇಸ್‌ ವಿಮಾನ ಯಾನ ಸಂಸ್ಥೆಯು 25ನೇ ವರ್ಷದ ಸಂಭ್ರಮದಲ್ಲಿದ್ದು, ಪ್ರತಿ ಕುಟುಂಬಕ್ಕೆ ಎರಡು ಉಚಿತ ಟಿಕೆಟ್ ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡಿದೆ.

ಜೆಟ್‌ ಏರ್‌ವೇಸ್ 25ನೇ ವರ್ಷಾಚರಣೆಯ ಹೊಸ್ತಿಲಿನಲ್ಲಿದ್ದು,  ಈ ಸಂಭ್ರಮಕ್ಕಾಗಿ ಪ್ರತಿ ಕುಟುಂಬಕ್ಕೆ 2 ಟಿಕೆಟ್‌ಗಳನ್ನು ಉಚಿತವಾಗಿ ಕೊಡಲಾಗುತ್ತಿದೆ ಎಂದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣವಾಗಿ ಸುಳ್ಳು. ಇದನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದೆ.

ಈ ಬಗ್ಗೆ ಟ್ವಿಟ್ ಮಾಡಿದ ಏರ್‌ವೇಸ್, #FakeAlert  ಜೆಟ್‌ಏರ್‌ವೇಸ್ ಯಾವುದೇ ಉಚಿತ ಕೊಡುಗೆಗಳನ್ನು ಘೋಷಿಸಿಲ್ಲ. ಇದು ಸುಳ್ಳು ಸುದ್ದಿ. ಇದನ್ನು ಗ್ರಾಹಕರು ನಂಬಬಾರದು. ಇದು ಅಧಿಕೃತ ಘೋಷಣೆಯಲ್ಲ. ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಅಕಸ್ಮಾತ್ ಇಂತಹ ಕೊಡುಗೆಗಳನ್ನು ನೀಡಿದ್ದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನೀಲಿ ಶಾಹಿಯಲ್ಲಿ (blue ink) ಸೂಚಿಸಲಾಗುತ್ತದೆ’ ಎಂದು ಟ್ವಿಟ್ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry