‘ಕನ್ನಡ ಕೋಗಿಲೆ’ ಆಡಿಷನ್

7

‘ಕನ್ನಡ ಕೋಗಿಲೆ’ ಆಡಿಷನ್

Published:
Updated:
‘ಕನ್ನಡ ಕೋಗಿಲೆ’ ಆಡಿಷನ್

‘ಜೂನ್‌ ತಿಂಗಳು, ಸೂಪರ್ ತಿಂಗಳು’ ಹೆಸರಿನಲ್ಲಿ ವೀಕ್ಷಕರಿಗೆ ಮಳೆಗಾಲದ ಮೊದಲ ತಿಂಗಳಿನಲ್ಲಿ ಭರ್ಜರಿ ಮನರಂಜನೆ ಒದಗಿಸುವ ಉದ್ದೇಶ ಇಟ್ಟುಕೊಂಡಿರುವ ‘ಕಲರ್ಸ್ ಸೂಪರ್’ ವಾಹಿನಿ, ಎರಡು ರಿಯಾಲಿಟಿ ಶೋಗಳನ್ನು ಕೂಡ ಆರಂಭಿಸಲಿದೆ.

ಬಿಗ್‍ಬಾಸ್ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನಲ್ಲಿ ಮನೆಮಾತಾದ ಚಂದನ್ ಶೆಟ್ಟಿ ನೇತೃತ್ವದಲ್ಲಿ ‘ಕನ್ನಡ ಕೋಗಿಲೆ’ ಎಂಬ ಹೆಸರಿನ ರಿಯಾಲಿಟಿ ಶೋ ಇವುಗಳಲ್ಲೊಂದು. ಇದು ರಾಜ್ಯದ ಪ್ರತಿಭಾನ್ವಿತ ಹಾಡುಗಾರರನ್ನು ಪರಿಚಯಿಸುವ ಕಾರ್ಯಕ್ರಮ.

ಈ ಕಾರ್ಯಕ್ರಮಕ್ಕೆ ಹಾಡುಗಾರರನ್ನು ಆಯ್ಕೆ ಮಾಡುವ ಆಡಿಷನ್‌ ಪ್ರಕ್ರಿಯೆ ಇದೇ ಭಾನುವಾರ (ಮೇ 27) ಬೆಂಗಳೂರಿನಲ್ಲಿ ನಡೆಯಲಿದೆ. ಆಡಿಷನ್‌ ವೇಳೆ ಚಂದನ್ ಶೆಟ್ಟಿ ಅವರೂ ಉಪಸ್ಥಿತರಿರುತ್ತಾರೆ. ಆಡಿಷನ್‌ ಮೂಲಕ ಆಯ್ಕೆಯಾದವರಿಗೆ ನುರಿತ ಹಾಡುಗಾರರಿಂದ ತರಬೇತಿ ನೀಡಲಾಗುತ್ತದೆಯಂತೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಯೋಮಿತಿ ಕನಿಷ್ಠ ಆರರಿಂದ ಗರಿಷ್ಠ ಅರವತ್ತು ವರ್ಷಗಳು. ‘ಬಾತ್‍ರೂಮ್ ಸಿಂಗರ್ ಆಗಿದ್ರೂ ಓಕೆ, ಪ್ರೊಫೆಷನಲ್ ಸಿಂಗರ್ ಆಗಿದ್ರೂ ಓಕೆ. ಆಸಕ್ತರು ಆಡಿಷನ್‍ನಲ್ಲಿ ಪಾಲ್ಗೊಳ್ಳಬಹುದು’ ಎಂದು ವಾಹಿನಿ ಹೇಳಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆಡಿಷನ್‌ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವವರು ಪಾಸ್‌ಪೋರ್ಟ್‌ ಗಾತ್ರದ ಐದು ಭಾವಚಿತ್ರಗಳನ್ನು, ಭಾವಚಿತ್ರ ಇರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತರಬೇಕು.

ಆಡಿಷನ್ ನಡೆಯುವ ಸ್ಥಳ: ಮ್ಯಾಕ್ಸ್‌ ಮುಲ್ಲರ್ ಪಬ್ಲಿಕ್‌ ಸ್ಕೂಲ್‌, 8ನೇ ಮುಖ್ಯ ರಸ್ತೆ, 2ನೇ ತಿರುವು, ಬಸವೇಶ್ವರ ನಗರ (ಕಮಲಾನಗರ ಬಸ್‌ ನಿಲ್ದಾಣದ ಬಳಿ), ಬೆಂಗಳೂರು. ಸಂಪರ್ಕ ಸಂಖ್ಯೆ: 9148843006. ವಾಟ್ಸ್‌ಆ್ಯಪ್‌ ಸಂಖ್ಯೆ: 9148834006

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry