ಏಷ್ಯನ್ ಗೇಮ್ಸ್‌ ಟ್ರಯಲ್ಸ್‌: ಸುಶೀಲ್, ಸಾಕ್ಷಿ ಇಲ್ಲ

7

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌: ಸುಶೀಲ್, ಸಾಕ್ಷಿ ಇಲ್ಲ

Published:
Updated:
ಏಷ್ಯನ್ ಗೇಮ್ಸ್‌ ಟ್ರಯಲ್ಸ್‌: ಸುಶೀಲ್, ಸಾಕ್ಷಿ ಇಲ್ಲ

ನವದೆಹಲಿ: ಸುಶೀಲ್‌ ಕುಮಾರ್‌ ಮತ್ತು ಸಾಕ್ಷಿ ಮಲಿಕ್‌ ಸೇರಿದಂತೆ ನಾಲ್ಕು ಮಂದಿ ಕುಸ್ತಿಪಟುಗಳು ಏಷ್ಯನ್‌ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ. ಇದಕ್ಕೆ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಸಮ್ಮತಿ ಸೂಚಿಸಿದೆ.

‘ಸುಶೀಲ್‌ (74 ಕೆ.ಜಿ), ಸಾಕ್ಷಿ (65 ಕೆ.ಜಿ), ವಿನೇಶಾ ಪೋಗಟ್‌ (50 ಕೆ.ಜಿ) ಹಾಗೂ ಬಜರಂಗ್‌ ಪೂನಿಯಾ (65 ಕೆ.ಜಿ) ಅವರು ಟ್ರಯಲ್ಸ್‌ನಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಅವರು ಪಾಲ್ಗೊಳ್ಳುವ ತೂಕದ ವಿಭಾಗಗಳಲ್ಲಿ ಬೇರೆ ಯಾರೂ ಸ್ಪರ್ಧಿಸುತ್ತಿಲ್ಲ. ಇವರು ಈಗಾಗಲೇ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಏಷ್ಯನ್‌ ಕೂಟದಲ್ಲೂ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಈ ನಾಲ್ಕು ಮಂದಿಯ ಮನವಿಯನ್ನು ಪುರಸ್ಕರಿಸಲಾಗಿದೆ’ ಎಂದು ಡಬ್ಲ್ಯುಎಫ್‌ಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸುಶೀಲ್‌ ಅವರು ಭಾರತ ತಂಡದ ಕೋಚ್‌ ವಿನೋದ್‌ ಅವರ ಮಾರ್ಗದರ್ಶನದಲ್ಲಿ ಛತ್ರಶಾಲಾ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ತೀರ್ಮಾನಿಸಿದ್ದಾರೆ. ವಿನೇಶಾ ಮತ್ತು ಸಾಕ್ಷಿ, ರಾಷ್ಟ್ರೀಯ ಶಿಬಿರದಲ್ಲಿದ್ದಾರೆ. ಬಜರಂಗ್‌ ಅವರು ಜಾರ್ಜಿಯಾದಲ್ಲಿ ವಿಶೇಷ ತರಬೇತಿ ಪಡೆಯಲು ನಿರ್ಧರಿಸಿದ್ದಾರೆ. ಹೀಗಿರುವಾಗ ಅವರನ್ನು ಟ್ರಯಲ್ಸ್‌ನಲ್ಲಿ ಭಾಗವಹಿಸುವಂತೆ ಹೇಳಿದರೆ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಕೋಚ್‌ಗಳ ಸಲಹೆ ಪಡೆದು ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ಅವರು ನುಡಿದಿದ್ದಾರೆ.

ಜೂನ್‌ 10ರಿಂದ ಸೋನೆಪತ್‌ನ ಭಾರತೀಯ ಕ್ರೀಡಾ ‍ಪ್ರಾಧಿಕಾರದಲ್ಲಿ ಪುರುಷರ ಫ್ರೀಸ್ಟೈಲ್‌ ಮತ್ತು ಗ್ರೀಕೊ ರೋಮನ್‌ ವಿಭಾಗಗಳ ಟ್ರಯಲ್ಸ್‌ ನಡೆಯಲಿದೆ. ಜೂನ್‌ 17ರಿಂದ ಲಖನೌದಲ್ಲಿ ಮಹಿಳೆಯರ ಟ್ರಯಲ್ಸ್‌ ನಡೆಯುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry